ಕರ್ನಾಟಕ

karnataka

ETV Bharat / sitara

ಮೋಹನ್ ಲಾಲ್ ಈಗ '12th Man': ತೆರೆಗೆ ಬರಲಿದೆ ಇನ್ನೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ - ದಿ ಟ್ವೆಲ್ತ್ ಮ್ಯಾನ್ ಸಿನಿಮಾದ ಪೋಸ್ಟರ್​ ಬಿಡುಗಡೆ

ಕೋಸ್ಟಲ್​ವುಡ್​ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ದಿ ಟ್ವೆಲ್ತ್ ಮ್ಯಾನ್ ಸಿನಿಮಾದ ಪೋಸ್ಟರ್​ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಒಂದು ದೊಡ್ಡ ಬಂಗಲೆಯಲ್ಲಿ ನಡೆಯುವಂತಹ ಕಥೆಯಾಗಿದೆ.

The 12th Man
ದಿ ಟ್ವೆಲ್ತ್ ಮ್ಯಾನ್ ಸಿನಿಮಾದ ಪೋಸ್ಟರ್​

By

Published : Jul 7, 2021, 1:26 PM IST

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ದೃಶ್ಯಂ 2 ಚಿತ್ರದ ನಂತರ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಇನ್ನೊಂದು ಚಿತ್ರದಲ್ಲಿ ಜೊತೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅದು ದೃಶ್ಯಂ 3 ಆಗಿರಲಿದೆಯಾ ಎಂಬ ಕುತೂಹಲವೂ ಕಾಡಿತ್ತು. ಇದೀಗ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಚಿತ್ರಕ್ಕೆ ದಿ 12th Man ಎಂಬ ಹೆಸರನ್ನು ಇಡಲಾಗಿದೆ.

ಸ್ವತಃ ಮೋಹನ್ ಲಾಲ್ ತಮ್ಮ ಅಭಿನಯದ ಹೊಸ ಚಿತ್ರದ ಹೆಸರನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಗೊಳಿಸಿದ್ದಾರೆ. ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ಹೊಸ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದಷ್ಟೇ ಹೇಳಿಕೊಂಡಿದ್ದಾರೆ. ಚಿತ್ರವನ್ನು ಜೀತು ಜೋಸೆಫ್ ನಿರ್ದೇಶನ ಮಾಡಿದರೆ, ದೃಶ್ಯಂ ಮತ್ತು ದೃಶ್ಯಂ 2 ಚಿತ್ರಗಳನ್ನು ನಿರ್ಮಿಸಿದ್ದ ಆಂಟೋನಿ ಪೆರುವಂಬೂರ್ ತಮ್ಮ ಆಶೀರ್ವಾದ್ ಸಿನಿಮಾಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮೋಹನ್ ಲಾಲ್ ಚಿತ್ರದ ಬಗ್ಗೆ ಏನೂ ಹೇಳದಿದ್ದರೂ, ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಎಲ್ಲವನ್ನೂ ಹೇಳುತ್ತದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಒಂದು ದೊಡ್ಡ ಬಂಗಲೆಯಲ್ಲಿ ನಡೆಯುವಂತಹ ಕಥೆಯಾಗಿದೆ. ಈ 12th ಮ್ಯಾನ್ ಯಾರು ಎಂದು ಗೊತ್ತಾಗಬೇಕಿದ್ದರೆ, ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು.

ಟ್ವೆಲ್ತ್ ಮ್ಯಾನ್ ಬಿಡುಗಡೆ ಯಾವಾಗ ಎಂದು ಪೋಸ್ಟರ್ ನೋಡಿ ಕುತೂಹಲ ಹೆಚ್ಚಿಸಿಕೊಂಡ ಅಭಿಮಾನಿಗಳು ಕೇಳುತ್ತಿದ್ದಾರೆ. ಆ ಬಗ್ಗೆ ಚಿತ್ರತಂಡ ಬಾಯಿಬಿಟ್ಟಿಲ್ಲ. ಮೋಹನ್ ಲಾಲ್ ಕೈಯಲ್ಲಿ ಹಲವು ಚಿತ್ರಗಳಿವೆ. ಮೇಲಾಗಿ, ಜೀತು ಜೋಸಫ್ ನಿರ್ದೇಶನದಲ್ಲೇ ರಾಮ್ ಎಂಬ ಚಿತ್ರವನ್ನು ಕಳೆದ ವರ್ಷವೇ ಒಪ್ಪಿಕೊಂಡಿದ್ದು, ಆ ಚಿತ್ರ ಸಹ ಮುಗಿಯಬೇಕಿದೆ. ಅವೆಲ್ಲದರ ನಡುವೆ ಟ್ವೆಲ್ತ್ ಮ್ಯಾನ್ ಚಿತ್ರೀಕರಣ ಯಾವಾಗ ಶುರುವಾಗುತ್ತದೋ, ಯಾವಾಗ ಮುಗಿದು ಬಿಡುಗಡೆಯಾಗುತ್ತದೋ ಎಂದು ವರ್ಷದ ಕೊನೆಯಲ್ಲೊಂದು ಸ್ಪಷ್ಟ ಚಿತ್ರಣ ಸಿಗಲಿದೆ.

ABOUT THE AUTHOR

...view details