ಕರ್ನಾಟಕ

karnataka

ETV Bharat / sitara

ಹುಟ್ಟುಹಬ್ಬಕ್ಕೆ ನಗ್ನವಾಗಿ ಓಡಿದ ಆರೋಪ: ಮಾಡೆಲ್​ ಮಿಲಿಂದ್​ ವಿರುದ್ಧ ಪ್ರಕರಣ - ಗೋವಾದ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟ ಮಿಲಿಂದ್ ಸೋಮನ್

ಮಾಡೆಲ್ ಮಿಲಿಂದ್ ಸೋಮನ್ ತನ್ನ ಹುಟ್ಟುಹಬ್ಬದಂದು ಗೋವಾ ಬೀಚ್‌ನಲ್ಲಿ ನಗ್ನವಾಗಿ ಓಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೆಲ ದಿನಗಳ ನಂತರ, ಅಶ್ಲೀಲತೆಯನ್ನು ಉತ್ತೇಜಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Model Milind Soman
ಮಿಲಿಂದ್ ಸೋಮನ್

By

Published : Nov 7, 2020, 1:44 PM IST

ಪಣಜಿ : ಜನ್ಮದಿನದಂದು ಗೋವಾದ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್​ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜಕೀಯ ಸಂಘಟನೆಯಾದ ಗೋವಾ ಸುರಕ್ಷ ಮಂಚ್ ನೀಡಿದ ದೂರಿನ ಅನ್ವಯ ಸೋಮನ್ ವಿರುದ್ಧ ಐಪಿಸಿ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪ್ರದರ್ಶನ ) ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ತನ್ನ 55 ನೇ ಹುಟ್ಟುಹಬ್ಬದಂದು ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ಫೋಟೋವನ್ನು ಸೋಮನ್ ತನ್ನ ಇನ್‌ಸ್ಟಾಗ್ರಾಮ್​ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದರು.

ದಕ್ಷಿಣ ಗೋವಾದ ಕೆನಕೋನಾ ಪಟ್ಟಣದ ಅಣೆಕಟ್ಟಿನಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಅತಿಕ್ರಮಣ ಮತ್ತು ಆಕ್ಷೇಪಾರ್ಹ ವಿಡಿಯೋವನ್ನು ಚಿತ್ರೀಕರಿಸಿದ ಆರೋಪದ ಮೇಲೆ ನಟಿ - ರೂಪದರ್ಶಿ ಪೂನಂ ಪಾಂಡೆ ಮತ್ತು ಅವರ ಪತಿಯನ್ನು ಪೊಲೀಸರು ಗುರುವಾರದಂದು ಬಂಧಿಸಿದ್ದರು.

ABOUT THE AUTHOR

...view details