ಕರ್ನಾಟಕ

karnataka

ETV Bharat / sitara

2017ರ ಮಿಸ್ ಇಂಡಿಯಾ ಸೌತ್​ ಬಿರುದು ಪಡೆದಿದ್ರು ಬಿಗ್​ ಬಾಸ್​ನ ಈ ಸ್ಪರ್ಧಿ! - ದಿವ್ಯಾ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಜನಪ್ರಿಯ ಮಾಡೆಲ್ ಕಂ ನಟಿ. ಮಾಡೆಲ್ ಆಗಿ ಆತ್ಮವಿಶ್ವಾಸ ಬೆಳೆಸಿಕೊಂಡ ದಿವ್ಯಾ 2017ರಲ್ಲಿ ಮಿಸ್ ಇಂಡಿಯಾ ಸೌತ್ ಎಂಬ ಬಿರುದು ಪಡೆದಿದ್ದರು.

model-divya-suresh-got-title-as-miss-india-south-2017
ದಿವ್ಯಾ ಸುರೇಶ್

By

Published : Jun 2, 2021, 12:54 PM IST

Updated : Jun 2, 2021, 1:02 PM IST

ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದವರು ಮನರಂಜನಾ ಕ್ಷೇತ್ರಕ್ಕೆ ಕಾಲಿರಿಸುವುದು ಕಾಮನ್ ಆಗಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿ, ಲಕ್ಷಾಂತರ ಜನರ ಮನ ಗೆದ್ದ ದಿವ್ಯಾ ಸುರೇಶ್ ಕೂಡ ಜನಪ್ರಿಯ ಮಾಡೆಲ್ ಕಂ ನಟಿ. ಈ ವಿಷಯ ಕೆಲವು ವೀಕ್ಷಕರಿಗೆ ತಿಳಿದಿಲ್ಲ.

ಹೌದು, ದಿವ್ಯಾ ಸುರೇಶ್ ಯಶಸ್ವಿ ರೂಪದರ್ಶಿ. ಅವರು ಮಾಡೆಲ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ಕಾಲೇಜು ದಿನಗಳಲ್ಲಿಯೇ ಮೊದಲ ಬಾರಿಗೆ ರ್ಯಾಂಪ್​​ ಮೇಲೆ ವಾಕ್ ಮಾಡಿದರು.

ದಿವ್ಯಾ ಸುರೇಶ್

ಮಾಡೆಲ್ ಆಗಿ ಆತ್ಮವಿಶ್ವಾಸ ಬೆಳೆಸಿಕೊಂಡ ದಿವ್ಯಾ ಸುರೇಶ್, ಆ ನಂತರ ಮಿಸ್ ಸೌತ್ ಇಂಡಿಯಾದಂತಹ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲ್ಲಿ ಅವರು ಫೈನಲ್​ಗೆ ಪ್ರವೇಶಿಸಿದರು. ಅಷ್ಟೆ ಅಲ್ಲ, ದಿವ್ಯಾ 2017ರಲ್ಲಿ ಮಿಸ್ ಇಂಡಿಯಾ ಸೌತ್ ಎಂಬ ಬಿರುದನ್ನೂ ಪಡೆದುಕೊಂಡರು. ಅಂದಿನಿಂದ ಇಂದಿನವರೆಗೂ ದಿವ್ಯಾ ಸುರೇಶ್ ಹಿಂತಿರುಗಿ ನೋಡೇ ಇಲ್ಲ.

ಅಲ್ಲದೆ ದಿವ್ಯಾ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡದ ಕಾರಣ ಹೆಚ್ಚು ಖ್ಯಾತಿ ಗಳಿಸಲಿಲ್ಲ. ಕೊನೆಗೂ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರುಪೇರು ಕಂಡ ನಂತರ, ದಿವ್ಯಾ ಸುರೇಶ್ ಬಿಗ್ ಬಾಸ್ ಕನ್ನಡ ಸೀಸನ್ 8ರ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದರು ಎಂದು ಈಗ ಹೇಳಬೇಕಾಗಿಲ್ಲ.

2017ರ ಮಿಸ್ ಇಂಡಿಯಾ ಸೌತ್​ ಬಿರುದು ಪಡೆದಿದ್ದ ದಿವ್ಯಾ ಸುರೇಶ್

ಈ ಬಾರಿ ಬಿಗ್ ಬಾಸ್​​ನಲ್ಲಿ ಕಠಿಣ ಸ್ಪರ್ಧೆ ನೀಡುವ ಸ್ಪರ್ಧಿ ಅನಿಸಿಕೊಂಡಿದ್ದ ದಿವ್ಯಾ ಸುರೇಶ್​​​ಗೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಅನುಯಾಯಿಗಳ ಸಂಖ್ಯೆಯೂ ಹೆಚ್ಚಾಗಿದೆ.

Last Updated : Jun 2, 2021, 1:02 PM IST

ABOUT THE AUTHOR

...view details