2012 ರಲ್ಲಿ ಬಿಡುಗಡೆಯಾಗಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಬಹುಭಾಷಾ ನಟಿ ಲಕ್ಷ್ಮಿ ಅಭಿನಯದ 'ಮಿಥುನಂ' ಸಿನಿಮಾ ಭಾರೀ ಯಶಸ್ಸು ಗಳಿಸಿತ್ತು. ಈ ಸಿನಿಮಾ ಬಿಡುಗಡೆಯಾದ ನಂತರ ಅನೇಕ ಬಾರಿ ಕಿರುತೆರೆಯಲ್ಲೂ ಪ್ರಸಾರ ಆಗಿದೆ. ಇದೀಗ 8 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
ಎಸ್ಪಿಬಿ-ಲಕ್ಷ್ಮಿ ಅಭಿನಯದ 'ಮಿಥುನಂ' ಕನ್ನಡಕ್ಕೆ ಡಬ್...ಶೀಘ್ರದಲ್ಲೇ ಥಿಯೇಟರ್ಗಳಲ್ಲಿ ರಿಲೀಸ್ - Tanikella Bharani Direction Mithunam
ತನಿಕೆಳ್ಳ ಭರಣಿ ನಿರ್ದೇಶನದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ 'ಮಿಥುನಂ' ಚಿತ್ರ ಕನ್ನಡಕ್ಕೆ ಡಬ್ ಆಗುತ್ತಿದ್ದು ಡಿಸೆಂಬರ್ನಲ್ಲಿ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
'ಮಿಥುನಂ' ಚಿತ್ರ ಕನ್ನಡಕ್ಕೆ ಡಬ್ ಆಗಿ 'ಮಿಥುನ' ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಆನಂದ್ ಮುಯಿದ ರಾವ್ ನಿರ್ಮಾಣದಲ್ಲಿ ತನಿಕೆಳ್ಳ ಭರಣಿ ನಿರ್ದೇಶಿಸಿದ್ದ ಈ ಸಿನಿಮಾಗೆ ಇದೀಗ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಕನ್ನಡದಲ್ಲಿ ಕೂಡಾ ಆನಂದ್ ಮಯಿದ ರಾವ್ ಅವರೇ ನಿರ್ಮಿಸುತ್ತಿದ್ದು ಮಧುಸೂದನ್ ಹವಾಲ್ದಾರ್ ನೇತೃತ್ವ ವಹಿಸಿದ್ದಾರೆ.
ಡಬ್ಬಿಂಗ್ಗೂ ಮುನ್ನ ಗುರುರಾಜ್ ಸ್ಟುಡಿಯೋದಲ್ಲಿ ಪೂಜಾ ಕಾರ್ಯ ನೆರವೇರಿದೆ. ಈ ವೇಳೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಉಪಸ್ಥಿತರಿದ್ದರು. ವರದರಾಜು ಚಿಕ್ಕಬಳ್ಳಾಪುರ 'ಮಿಥುನ' ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಡಿಸೆಂಬರ್ನಲ್ಲಿ 'ಮಿಥುನ' ಸಿನಿಮಾ ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.