ಹಾಗೆ ನೋಡಿದರೆ ದತ್ತಣ್ಣ ಮೊದಲು ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದೇ ಹಿಂದಿ ಸಿನಿಮಾದಿಂದ. ಈಗ 'ಮಿಷನ್ ಮಂಗಲ್' ಸಿನಿಮಾದಲ್ಲಿ ಅವರು ‘ಸ್ಟ್ರಕ್ಚರಲ್ ಇಂಜಿನಿಯರ್’ ಪಾತ್ರ ನಿರ್ವಹಿಸಿದ್ದಾರೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯಾ ಮೆನನ್, ತಾಪ್ಸಿ ಪನ್ನು, ಶರ್ಮನ್ ಜೋಷಿ, ಕೃತಿ ಕುಲ್ಜಾರಿ ಹಾಗೂ ಇತರರು ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಸಹ ಕನ್ನಡಿಗ ಜಗನ್ ಶಕ್ತಿ. ಇವರು ಶ್ರೀಮುರಳಿ ಅಭಿನಯದ ‘ಉಗ್ರಂ’ ಸಿನಿಮಾದಲ್ಲಿ ಸಹ ಕೆಲಸ ಮಾಡಿದ್ದರು.
ದತ್ತಣ್ಣ ಅಭಿನಯದ 'ಮಿಷನ್ ಮಂಗಲ್' ಟ್ರೇಲರ್ ಸೂಪರ್ ಹಿಟ್ - undefined
ಹಿಂದಿಯ ‘ಮಿಷನ್ ಮಂಗಲ್’ ಸಿನಿಮಾ ಟ್ರೇಲರ್ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಹು ದೊಡ್ಡ ತಾರಾಗಣದ ಈ ಸಿನಿಮಾದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಸಹ ಅಭಿನಯಿಸಿದ್ದು, ಈಗ ಅವರ ಪಾತ್ರ ಟ್ರೈಲರ್ಲ್ಲಿಯೇ ಹೆಚ್ಚು ಜನಪ್ರಿಯ ಆಗಿದೆ.

ಮಿಷನ್ ಮಂಗಲ್
ಈ ಮಿಷನ್ ಮಂಗಲ್ ಸಿನಿಮಾದಲ್ಲಿ ಬೆಂಗಳೂರಿನ ವಿಧಾನಸೌಧ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಹಾಸನದ ಇಸ್ರೊ ಸಂಸ್ಥೆಯ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ’ (ಎಂಸಿ ಎಫ್) ಹೋಲುವ ಹಾಗೆ ಸೆಟ್ ಹಾಕಲಾಗಿದ್ದು, ಬಹುತೇಕ ಚಿತ್ರೀಕರಣ ಇಲ್ಲಿಯೇ ಮಾಡಲಾಗಿದೆ. ಉಪಗ್ರಹ ಉಡಾವಣೆ ಕುರಿತಾದ ಈ ಸಿನಿಮಾ 2013 ರ ಭಾರತೀಯ ಬಾಹ್ಯಾಕಾಶ ವಿಭಾಗದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ತಯಾರಿಸಲಾಗಿದೆ.