ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ 'ಮಿಸ್ಸಿಂಗ್ ಬಾಯ್ ' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾವನ್ನು ರಘುರಾಮ್ ನಿರ್ದೇಶಿಸಿದ್ದಾರೆ.
'ಮಿಸ್ಸಿಂಗ್ ಬಾಯ್' ಸಾಕುತಾಯಿಯನ್ನು ಭೇಟಿ ಮಾಡಿದ ಚಿತ್ರತಂಡ - undefined
ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ರಘುರಾಮ್ ನಿರ್ದೇಶಿಸಿರುವ 'ಮಿಸ್ಸಿಂಗ್ ಬಾಯ್ ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡ ಇದೀಗ ನಿಜಜೀವನದ ಸಾಕುತಾಯಿಯನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಬಂದಿದೆ.
!['ಮಿಸ್ಸಿಂಗ್ ಬಾಯ್' ಸಾಕುತಾಯಿಯನ್ನು ಭೇಟಿ ಮಾಡಿದ ಚಿತ್ರತಂಡ](https://etvbharatimages.akamaized.net/etvbharat/images/768-512-2795255-164-8149fad1-9e1f-44cf-8501-1c7a23670959.jpg)
ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿಂದ ದೂರವಾಗಿದ್ದ ಬಾಲಕನೊಬ್ಬ ಶ್ರೀಮಂತರ ಮನೆಯಲ್ಲಿ ಬೆಳೆದು ದೊಡ್ಡ ಉದ್ಯಮಿ ಆಗುತ್ತಾನೆ. ಆಗಾಗ್ಗೆ ಚಿಕ್ಕಂದಿನ ಘಟನೆಗಳೆಲ್ಲಾ ತನ್ನ ಕನಸಿಗೆ ಬರುವುದರಿಂದ ಆತ ಬಹಳ ಡಿಸ್ಟರ್ಬ್ ಆಗುತ್ತಾನೆ. ತನ್ನ ಹೆತ್ತವರನ್ನು ಹುಡುಕಿಕೊಂಡು ಹೋಗುವ ಆತನಿಗೆ ನಿಜವಾದ ತಂದೆ-ತಾಯಿ ಸಿಗುತ್ತಾರಾ ಎನ್ನುವುದೇ ಚಿತ್ರಕಥೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಆದರೆ ಸಿನಿಮಾದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ.
ನಿಜ ಜೀವನದಲ್ಲಿ ಬಾಲಕನನ್ನು ಸಾಕಿದ ತಾಯಿಯನ್ನು 'ಮಿಸ್ಸಿಂಗ್ ಬಾಯ್' ಚಿತ್ರತಂಡ ಭೇಟಿ ಮಾಡಿದೆ. ಹುಬ್ಬಳ್ಳಿ ಜಿಲ್ಲೆಯ ಗಣೇಶ್ ಪೇಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಮೌಲ್ಯ ಎಂಬ ಮಹಿಳೆಯನ್ನು ಗುರುನಂದನ್, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.