ಕರ್ನಾಟಕ

karnataka

ETV Bharat / sitara

ಬ್ರೇಕ್​ ನಂತರ ಮತ್ತೆ ಗಾಂಧಿನಗರದಲ್ಲಿ ಗುರುನಂದನ್ ಪ್ರತ್ಯಕ್ಷ!! - ಹೊಸ ಸಿನಿಮಾ

ಇತ್ತೀಚೆಗೆ ರಾಮ್ ಲೀಲಾ ಹಾಗೂ ಸಿಂಗ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು ಗುರುನಂದನ್‌ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆದರೆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ.

actor Gurunandan

By

Published : Aug 20, 2019, 1:18 AM IST

ಮಿಸ್ಸಿಂಗ್ ಬಾಯ್ ಸಿನಿಮಾದ ನಂತರ ನಟ ಗುರುನಂದನ್ ಬ್ರೇಕ್ ಪಡೆದಿದ್ದು, ಮತ್ತೆ ಸ್ಯಾಂಡಲ್​ವುಡ್​ನ ಹೆಸರಿಡದ ಚಿತ್ರದ ಮೂಲಕ ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಜಯಣ್ಣ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದೆ, ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದ್ದು, ಇದರಲ್ಲಿ ಲವ್‌ಸ್ಟೋರಿಯೂ ಇದೆ, ಹಾಸ್ಯವೂ ಮೇಳೈಸಲಿದೆ. ಜೊತೆಗೆ ಒಂದಷ್ಟು ಎಮೋಷನ್ಸ್‌ ಕೂಡ ಇದೆ. ಈ ಹಿಂದೆ ರಾಮ್ ಲೀಲಾ ಹಾಗೂ ಸಿಂಗ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ನಟ ಗುರುನಂದನ್​

ಇನ್ನು ಚಿತ್ರಕ್ಕಾಗಿ ನಾಯಕಿ ಹುಡುಕಾಟ ನಡೆದಿದ್ದು, ಸಾಧುಕೋಕಿಲ, ಶಿವಾರಾಜ್ ಕೆ.ಆರ್.ಪೇಟೆ, ಕಡ್ಡಿಪುಡಿ ಚಂದ್ರು, ಕುರಿ ಪ್ರತಾಪ್, ವಿಶ್ವ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ವಿಜಯ್ ಕಿರಣ್ ಕಥೆ, ಚಿತ್ರಕೆಥೆ ಬರೆದಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.

ಕವಿರಾಜ್ ಈ ಚಿತ್ರ ಸಾಹಿತ್ಯ ಬರೆದಿದ್ದು, ಶಂಕರನ್ ಸಂಗೀತ ನೀಡಲಿದ್ದಾರೆ, ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಪಳನಿರಾಜ್ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮಿಸ್ಸಿಂಗ್ ಬಾಯ್ ಸಿನಿಮಾ ಗುರುನಂದನ್​ಗೆ ಅಷ್ಟೊಂದು ಹೆಸರು ತಂದುಕೊಡದ ಹಿನ್ನಲೆಯಲ್ಲಿ ಸ್ವಲ್ಪ ದಿನಗಳ ಕಾಲ ಬ್ರೇಕ್ ತಗೆದುಕೊಂಡಿದ್ದರು. ಈಗ ಹೆಸರಿಡದ ಚಿತ್ರದಲ್ಲಿ ಗುರುನಂದನ್ ಮತ್ತೆ ಫಸ್ಟ್ ರ್ಯಾಂಕ್ ಶೈಲಿಯ ಪಾತ್ರ ಮಾಡಲಿದ್ದಾರೆ.

ABOUT THE AUTHOR

...view details