ಕರ್ನಾಟಕ

karnataka

ETV Bharat / sitara

ಬಣ್ಣದ ಲೋಕಕ್ಕೆ ರಾಜಕಾರಣಿ ಮಕ್ಕಳು... ಚಂದನವನಕ್ಕೆ ಬರ್ತಿದ್ದಾನೆ ರಾಜ್ಯ ಸಚಿವರ ಪುತ್ರ - undefined

ಸಚಿವ ಜಮೀರ್ ಅಹಮದ್ ಪುತ್ರ ಜಯಿದ್ ಖಾನ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಣ್ಣದ ಲೋಕಕ್ಕೆ ಪುತ್ರನ ಪರಿಚಯ ಮಾಡೋಕೆ ಜಮೀರ್​ ಮುಂದಾಗಿದ್ದಾರೆ.

ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್

By

Published : Apr 20, 2019, 5:53 PM IST

ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಹೊಸದೇನಲ್ಲ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​​, ಮಾಜಿ ಸಚಿವ ಹೆಚ್​.ಎಂ.ರೇವಣ್ಣ, ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಕೂಡ ಬಣ್ಣದ ಅಂಗಳಕ್ಕೆ ಬಂದಾಗಿದೆ.

ಈಗ ಸಚಿವ ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್ ತೆರೆಯ ಮೇಲೆ ನಾಯಕನಾಗೋಕೆ ರೆಡಿಯಾಗ್ತಿದ್ದಾರೆ. ಜಯಿದ್​ ಅಭಿನಯಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ್ದಾರೆ. ಅಮೆರಿಕಾದಲ್ಲಿ ನಟನೆಯ ಕೋರ್ಸ್ ಮುಗಿಸಿ ಬಂದಿದ್ದು, ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ನಿರ್ದೇಶಕ ಜಯತೀರ್ಥ ಅವರಿಗೆ ನೀಡಿದ್ದಾರೆ .

ಜಯಿದ್ ಖಾನ್

ಈಗಾಗಲೇ ಜಮೀರ್ ಹಾಗೂ ಜಯತೀರ್ಥ ಈ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಜಯಿದ್​ಗೆ ಕಥೆ ಬರೆಯೋದಕ್ಕೆ ರೆಡಿಯಾಗ್ತಿರುವುದಾಗಿ ಜಯತೀರ್ಥ 'ಈಟಿವಿ ಭಾರತ್​​'ಗೆ ತಿಳಿಸಿದ್ದಾರೆ. ಹೊಸ ರೀತಿಯ ಕಥೆ ಮಾಡಲು ಪ್ಲ್ಯಾನ್​ ಮಾಡ್ತಿದ್ವಿ. ಈ ಕಥೆ ಜಮೀರ್ ಅಹಮದ್ ಅವರಿಗೆ ಇಷ್ಟವಾದ್ರೆ ಖಂಡಿತಾ ಜಯಿದ್ ಅವರ ಚೊಚ್ಚಲ ಚಿತ್ರ ನಾನೇ ನಿರ್ದೇಶನ ಮಾಡ್ತೀನಿ ಎಂದಿದ್ದಾರೆ ಜಯತೀರ್ಥ.

ಜಯಿದ್ ಖಾನ್

ಜಯತೀರ್ಥ ಸ್ಯಾಂಡಲ್​​ವುಡ್ ಯಶಸ್ವಿ ನಿರ್ದೇಶಕ. ಇತ್ತೀಚಿಗಷ್ಟೆ ಅವರ ನಿರ್ದೇಶನದ 'ಬೆಲ್ ಬಾಟಂ' ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿದೆ.

For All Latest Updates

TAGGED:

ABOUT THE AUTHOR

...view details