ಕರ್ನಾಟಕ

karnataka

ETV Bharat / sitara

ಪ್ರಕೃತಿ ಮಡಿಲಲ್ಲಿ ಎಂಜಾಯ್ ಮಾಡುತ್ತಿರುವ ಮಿಲ್ಕಿ ಬ್ಯೂಟಿ - Tamanna Bhatia playing in water

ಲಾಕ್​ ಡೌನ್ ಸಡಿಲವಾಗುತ್ತಿದ್ದಂತೆ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಕುಟುಂಬದೊಂದಿಗೆ ಟ್ರಕ್ಕಿಂಗ್ ಹೋಗಿದ್ದು ಪ್ರಕೃತಿ ಮಡಿಲಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಾವು ನೀರಿನಲ್ಲಿ ಆಟ ಆಡುತ್ತಿರುವ ಫೋಟೋವನ್ನು ತಮನ್ನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.

Tamanna enjoying with Nature
ಮಿಲ್ಕಿ ಬ್ಯೂಟಿ

By

Published : Jul 30, 2020, 5:47 PM IST

ಆ್ಯಕ್ಟಿಂಗ್ ಹಾಗೂ ತನ್ನ ಅಂದದಿಂದ ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಮಿಲ್ಕಿ ಬ್ಯೂಟಿ, 5 ತಿಂಗಳಿಂದ ಮನೆಯಲ್ಲಿದ್ದಾರೆ. ಸದಾ ಶೂಟಿಂಗ್​ ಅಂತ ಹೊರಗೆ ಇರುತ್ತಿದ್ದ ತಮನ್ನಾ ಭಾಟಿಯಾ ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ತಮ್ಮನ್ನಾ ಪ್ರಕೃತಿ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ವಾರದ ಹಿಂದೆ ತಾವು ಸುಂದರ ಹಸಿರು ಪ್ರಕೃತಿ ಮಧ್ಯೆ ಟ್ರಕ್ಕಿಂಗ್ ಹೋಗುತ್ತಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ತಮ್ಮನ್ನಾ ನಿನ್ನೆ, ಝರಿ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್, ಡಬ್ಬಿಂಗ್ ನಡುವೆ ಸ್ವಲ್ಪ ಸಮಯ ದೊರೆತರೆ ಸಾಕು ಫ್ಯಾಮಿಲಿ ಜೊತೆ ಎಂಜಾಯ್ ಮಾಡಲು ಕಾಯುತ್ತಿದ್ದ ತಮನ್ನಾಗೆ ಈಗ ಸ್ವರ್ಗ ಸಿಕ್ಕಿದಂತಾಗಿದೆ.

'ವೈ-ಫೈ ಪ್ರಪಂಚದಿಂದ ದೂರ ಇದ್ದು ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುವುದೇ ಸಂತೋಷದ ವಿಚಾರ, ಯಾರೇ ಆಗಲಿ ಪ್ರಕೃತಿ ಮುಂದೆ ತಲೆ ಬಾಗಲೇಬೇಕು. ಈ ಸುಂದರ ಪ್ರಕೃತಿಗೆ ಎಲ್ಲರ ಮನಸ್ಸನ್ನು ಸಂತೋಷಪಡಿಸುವ ಶಕ್ತಿ ಇದೆ. ಪ್ರಕೃತಿಯನ್ನು ನಾವೆಲ್ಲರೂ ಕಾಪಾಡಬೇಕು. ನಮ್ಮನ್ನು ನಾವು ಎಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೋ, ಪ್ರಕೃತಿಯನ್ನು ಕೂಡಾ ಅದೇ ರೀತಿ ಕಾಪಾಡಿಕೊಳ್ಳುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡೋಣ' ಎಂದು ತಮ್ಮನ್ನಾ ತಮ್ಮ ಫೊಟೋ ಜೊತೆ ಬರೆದುಕೊಂಡಿದ್ದಾರೆ.

ತಮನ್ನಾ ಕರಿಯರ್ ವಿಚಾರಕ್ಕೆ ಬರುವುದಾದರೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಕ್ವೀನ್ ಚಿತ್ರದ ರೀಮೇಕ್​​​​​​​​​ 'ದಟ್ ಇಸ್ ಮಹಾಲಕ್ಷ್ಮಿ' ಶೀಘ್ರವೇ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇದರೊಂದಿಗೆ ನವಾಜುದ್ದೀನ್ ಸಿದ್ಧಿಕಿ ಅವರೊಂದಿಗೆ 'ಬೋಲೇ ಚುಡಿಯಾನ್', ಗೋಪಿಚಂದ್ ಜೊತೆ 'ಸೀಟಿ ಮಾರೋ' ಹಾಗೂ ಕನ್ನಡದ 'ಲವ್ ಮಾಕ್​​ಟೇಲ್' ರೀಮೇಕ್​​​ನಲ್ಲಿ ಸತ್ಯದೇವ್ ಜೊತೆ ತಮನ್ನಾ ನಟಿಸಲಿದ್ದಾರೆ.

ABOUT THE AUTHOR

...view details