ಬಿಟೌನ್ ಖ್ಯಾತ ಮಾಡೆಲ್ ಹಾಗೂ ನಟ ಮಿಲಿಂದ್ ಸೋಮನ್ ಇಂದು 55ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದ ಪ್ರಯುಕ್ತ ತಮಗೆ ತಾವೇ ವಿಶ್ ಮಾಡಿಕೊಂಡಿರುವ ನಟ, ಸಮುದ್ರ ತೀರದಲ್ಲಿ ಬೆತ್ತಲಾಗಿ ಓಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಮಿಲಿಂದ್ ಸೋಮನ್ ಬೆತ್ತಲಾಗಿ ಓಡುತ್ತಿರುವ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ತೆಗೆದಿರುವುದು ಬೇರೆ ಯಾರೂ ಅಲ್ಲದೆ ಸ್ವತಃ ಮಿಲಿಂದ್ ಪತ್ನಿ ಅಂಕಿತಾ.