ಕರ್ನಾಟಕ

karnataka

ETV Bharat / sitara

ಬಾಚ್ಯುಲರ್ಸ್‌‌ ಪಾರ್ಟಿಯಲ್ಲಿ ಮಿಂಚಿದ 'ಲವ್ ಮಾಕ್​​​​ಟೇಲ್'​​ ಜೋಡಿ - Darling Krishna pre wedding party

ಮುಂದಿನ ವರ್ಷ ಪ್ರೇಮಿಗಳ ದಿನದಂದು ಸತಿ-ಪತಿಗಳಾಗುತ್ತಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತರಿಗಾಗಿ ಬ್ಯಾಚುಲರ್ಸ್ ಪಾರ್ಟಿ ಆಯೋಜಿಸಿದ್ದಾರೆ. ಈ ಪ್ರೀ ವೆಡ್ಡಿಂಗ್ ಫೋಟೋಗಳನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Pre wedding party
ಕೃಷ್ಣ, ಮಿಲನಾ

By

Published : Dec 22, 2020, 10:42 AM IST

'ಲವ್ ಮಾಕ್​​ಟೇಲ್'​ ಜೋಡಿಗಳಾದ ಮಿಲನಾ ನಾಗರಾಜ್ ಹಾಗೂ ಕೃಷ್ಣ 2021 ಫೆಬ್ರವರಿ 14 ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯೇ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದ್ದ ಜೋಡಿ ಇತ್ತೀಚೆಗೆ ಕಾಂಚಿಪುರಂಗೆ ತೆರಳಿ ಮದುವೆಗೆ ಬೇಕಾದ ಬಟ್ಟೆಗಳ ಶಾಪಿಂಗ್ ಕೂಡಾ ಮಾಡಿ ಬಂದಿತ್ತು. ಇದೀಗ ಈ ಜೋಡಿ ಸ್ನೇಹಿತರಿಗಾಗಿ ಬ್ಯಾಚುರಲ್ ಪಾರ್ಟಿ ನೀಡಿದೆ.

ಮಿಲನಾ ನಾಗರಾಜ್

ಇದನ್ನೂ ಓದಿ: ಷೇಕ್ಸ್​​​​ಪಿಯರ್​​​​​ ನಾಟಕ ಆಧರಿಸಿದ ಸಿನಿಮಾದಲ್ಲಿ ಸತೀಶ್​ ನೀನಾಸಂ

ಲವ್ ಮಾಕ್​ಟೇಲ್ ಸೀಕ್ವೆಲ್​​​ನಲ್ಲಿ ಬ್ಯುಸಿ ಇರುವ ಲವ್ ಮಾಕ್​ಟೇಲ್ ಜೋಡಿ, ಬಿಡುವು ಮಾಡಿಕೊಂಡು ಸ್ನೇಹಿತರಿಗೆ ಪ್ರೀವೆಡ್ಡಿಂಗ್ ಪಾರ್ಟಿ ಆಯೋಜಿಸಿದೆ. ಮುಖ್ಯವಾಗಿ ಸ್ನೇಹಿತರು, ಕುಟುಂಬದ ಸದಸ್ಯರು ಹಾಗೂ ಲವ್ ಮಾಕ್​ಟೇಲ್ ತಂಡ ಈ ಪಾರ್ಟಿಯಲ್ಲಿ ಹಾಜರಿತ್ತು. ಇದು ನಮಗೆ ಸೂಕ್ತ ಸಮಯ. ಎಲ್ಲರಿಗೂ 10 ದಿನಗಳು ಬಿಡುವು ಇದೆ. ನಂತರ ಎಲ್ಲರೂ ಶೂಟಿಂಗ್​​ನಲ್ಲಿ ಬ್ಯುಸಿಯಾಗುತ್ತೇವೆ. ಈಗ ಎಲ್ಲರೂ ಸಂತೋಷದಿಂದ ಪಾರ್ಟಿಯನ್ನು ಎಂಜಾಯ್ ಮಾಡಬಹುದು ಎಂಬ ಕಾರಣಕ್ಕೆ ಈಗ ಪಾರ್ಟಿ ಆಯೋಜಿಸಿದ್ದೇವೆ ಎಂದು ಮಿಲನಾ ಹಾಗೂ ಕೃಷ್ಣ ಹೇಳಿದ್ದಾರೆ. ಪಾರ್ಟಿಯಲ್ಲಿ ಮಿಲನಾ ನಾಗರಾಜ್ ತಿಳಿ ನೀಲಿ ಬಣ್ಣದ ಡ್ರೆಸ್​ ಹಾಗೂ ಕೃಷ್ಣ ಬಿಳಿ ಪ್ಯಾಂಟ್​​, ಷರ್ಟ್​ ಧರಿಸಿ ಅದರ ಮೇಲೆ ತಿಳಿ ನೀಲಿ ಬಣ್ಣದ ಬ್ಲೇಜರ್ ಧರಿಸಿ ಸುಂದರವಾಗಿ ಕಾಣುತ್ತಿದ್ದು ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದವರು ಭಾವಿ ದಂಪತಿಗೆ ಶುಭ ಕೋರಿದ್ದಾರೆ.

ಬಾಚ್ಯುಲರ್ಸ್‌‌ ಪಾರ್ಟಿಯಲ್ಲಿ ಕೃಷ್ಣ, ಮಿಲನಾ

ABOUT THE AUTHOR

...view details