ಕರ್ನಾಟಕ

karnataka

ETV Bharat / sitara

ಇವರೇ ನೋಡಿ ರಾಬರ್ಟ್​ ರಾಣಿ - ಡಿ ಬಾಸ್ ದರ್ಶನ್

ತರುಣ್ ಸುಧೀರ್ ನಿರ್ದೇಶನ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದೆ.

MEHREEN PIRZADA

By

Published : Aug 28, 2019, 9:03 AM IST

ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಕ್ಕೆ ಪರಭಾಷಾ ನಟಿ ಕರೆ ತರುತ್ತಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪಂಜಾಬಿ ನಟಿ ಮೇಹ್ರೀನ್ ಪಿರ್ಜಾದ್ ತೆಲುಗು, ತಮಿಳು, ಹಿಂದಿ ನಂತರ ಈಗ ಸ್ಯಾಂಡಲ್​​ವುಡ್​​ಗೆ ಬರುತ್ತಿದ್ದಾರೆ.

ರಾಬರ್ಟ್​

ಡಿ ಬಾಸ್ ದರ್ಶನ್ ಅವರು ಈಗ ಹೊಸ ದಾಖಲೆ ಬರೆದಿರುವ ನಟ. ಅವರ ‘ಕುರುಕ್ಷೇತ್ರ’ 3 ಡಿ ಹಾಗೂ 2 ಡಿ ಸಿನಿಮಾ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಈಗ ‘ರಾಬರ್ಟ್’ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಸೆಪ್ಟೆಂಬರ್ 5 ರಿಂದ ಎರಡನೇ ಹಂತಕ್ಕೆ ಕಾಲಿಡುತ್ತಿದೆ. ಹೈದರಾಬಾದ್​ನ ರಾಮೋಜಿ ಪಿಲ್ಮ್ ಸಿಟಿಯಲ್ಲಿ 15 ದಿವಸದ ಚಿತ್ರೀಕರಣ ನಡೆಯಲಿದೆ.

ಮೇಹ್ರೀನ್ ಪಿರ್ಜಾದ್

ಬಹುನಿರೀಕ್ಷಿತ ರಾಬರ್ಟ್​ ಚಿತ್ರಕ್ಕೆ ಅನೇಕ ನಾಯಕಿಯರನ್ನು ತಲಾಶ್​ ಮಾಡಿ ಕೊನೆಗೆ ಪಂಜಾಬಿ ಮೂಲದ ಮೇಹ್ರೀನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಮಾಡೆಲ್ ಕ್ಷೇತ್ರದಿಂದ ಬಂದು ದಕ್ಷಿಣ ಭರತದಲ್ಲಿ ಮೊದಲು 'ಕೃಷ್ಣಗಾಡಿ ವೀರ ಪ್ರೇಮಗಧಾ’ ಇಂದ ಬೆಳಕಿಗೆ ಬಂದವರು. ಆನಂತರ ಮಹಾನುಭಾವುಡು, ಜವಾನ್, ರಾಜ ದಿ ಗ್ರೇಟ್, ಹಿಂದಿಯಲ್ಲಿ ‘ಪಿಳ್ಳುರಿ’ ತಮಿಳಿನಲ್ಲಿ ‘ನೋಟಾ, ಪಟ್ಟಾಸ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details