ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಯುವ ಸಾಮ್ರಾಟ್ ಅಂತಾನೆ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು. ಇದು ಸರ್ಜಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿತ್ತು.
ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ ಆಗಿದ್ದರು. ಪತಿ ಸಾವಿನ ದುಃಖದಲ್ಲಿಯೇ ದಿನದೂಡಿದ ಮೇಘನಾ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ಜನಿಸಿದ್ದರಿಂದ ಆತನನ್ನು ಜೂನಿಯರ್ ಚಿರು ಎಂದೇ ಕರೆಯಲಾಗಿತ್ತು. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುವುದಾಗಿ ಮೇಘನಾ ಹೇಳಿಕೊಂಡಿದ್ದರು. ಈಗ ಮೇಘನಾ ಮಗುವಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದು, ಸಿಂಬಾಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.