ದಿ.ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಕೆ.ಆರ್.ರಸ್ತೆಯಲ್ಲಿರೋ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು ಹೆರಿಗೆಗೆ ಸಂಬಂಧಿಸಿದಂತೆ ಚೆಕ್‌ಅಪ್ ಮಾಡಿಸಿದ್ದಾರೆ.
ಅಕ್ಷ ಆಸ್ಪತ್ರೆಗೆ ಭೇಟಿ ಕೊಟ್ಟ ಮೇಘನಾ ರಾಜ್, ಜೂನಿಯರ್ ಚಿರುಗಾಗಿ ಕಾತರ - ಮೇಘನಾ ರಾಜ್ ಸುದ್ದಿ
ಇಂದು ಮೇಘನಾ ರಾಜ್ ಅಕ್ಷ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ವೈದ್ಯರು ಹೇಳಿರುವ ಪ್ರಕಾರ ನಾಳೆ ಅಥವಾ ನಾಡಿದ್ದು ಅವರಿಗೆ ಹೆರಿಗೆ ಆಗುವ ಸಾಧ್ಯತೆ ಇದೆ.

ಅಕ್ಷ ಆಸ್ಪತ್ರೆಗೆ ಭೇಟಿ ಕೊಟ್ಟ ಮೇಘನಾ ರಾಜ್ : ನಾಳೆ ಬರ್ತಾನಾ ಜೂನಿಯರ್ ಚಿರು
ತಂದೆ ಸುಂದರ್ ರಾಜ್ ಹಾಗು ತಾಯಿ ಪ್ರಮೀಳಾ ಜೊತೆ ಮೇಘನಾ ರಾಜ್ ಆಸ್ಪತ್ರೆಗೆ ಬಂದಿದ್ದರು. ಇವರ ಜೊತಗೆ ನಟ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಹಾಗು ತಾಯಿ ಇದ್ದರು.
ಅಕ್ಷ ಆಸ್ಪತ್ರೆಗೆ ಭೇಟಿ ಕೊಟ್ಟ ಮೇಘನಾ ರಾಜ್
ಆಸ್ಪತ್ರೆಯ ಮೂಲಗಳು ಹೇಳುವ ಪ್ರಕಾರ, ನಾಳೆ ಮೇಘನಾ ರಾಜ್ ಆಸ್ಪತ್ರೆಗೆ ದಾಖಲಾಗಲಿದ್ದು ನಾಳೆ ಅಥವಾ ನಾಡಿದ್ದು ಡೆಲಿವರಿ ಆಗುವ ಸಾಧ್ಯತೆ ಇದೆ.
Last Updated : Oct 20, 2020, 3:39 PM IST