ಕರ್ನಾಟಕ

karnataka

ETV Bharat / sitara

ಲವ್ ಯು ಚಿರು, ಮತ್ತೆ ಹುಟ್ಟಿ ಬಾ ಎಂದ ಮೇಘನಾ ರಾಜ್ - meghana raj latest news

ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾರನ್ನು ನೆನೆದು ಪತ್ನಿ ಮೇಘನಾ ಭಾವುಕರಾಗಿದ್ದಾರೆ. ಲವ್ ಯೂ ಚಿರು.. ಮರಳಿ ಬಾ ಎಂದು ಬರೆದು ಸೆಲ್ಫಿಗೆ ಪೋಸ್ ನೀಡಿರುವ ಫೋಟೋವೊಂದನ್ನು ಮೇಘನಾ ರಾಜ್​​ ಹಂಚಿಕೊಂಡಿದ್ದಾರೆ.

meghana raj and chiru
ಲವ್ ಯು ಚಿರು ಮತ್ತೆ ಹುಟ್ಟಿ ಬಾ ಎಂದ ಮೇಘಾನಾ ರಾಜ್....

By

Published : Apr 30, 2021, 10:59 AM IST

Updated : Apr 30, 2021, 11:48 AM IST

ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿ ಜೂನ್​ಗೆ ಒಂದು ವರ್ಷವಾಗಲಿದೆ. ಪತಿ ಇಲ್ಲದ ಜೀವನವನ್ನು ಮೇಘನಾ ರಾಜ್ ನೆನೆದು ಭಾವುಕರಾಗುತ್ತಿರುತ್ತಾರೆ. ಇದೀಗ ಮತ್ತೆ ಮೇಘನಾ ತಮ್ಮ ಪತಿ ಚಿರು ಅವರನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ. ಚಿರು ಜತೆ ಪ್ರವಾಸಕ್ಕೆ ಹೋದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಲವ್ ಯು ಚಿರು, ಮತ್ತೆ ಹುಟ್ಟಿ ಬಾ ಎಂದ ಮೇಘಾನಾ ರಾಜ್....

ಇಬ್ಬರೂ ನಗು ನಗುತ್ತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತೆ. ಈ ಸುಂದರವಾದ ಹಳೆಯ ಫೋಟೋವನ್ನು ಹಂಚಿಕೊಂಡು, ಲವ್ ಯೂ ಚಿರು.. ಮರಳಿ ಬಾ ಎಂದು ಬರೆದು ಮೇಘನಾ ಭಾವುಕರಾಗಿದ್ದಾರೆ. ಮೇಘನಾ ಅವರ ಈ ಪೋಸ್ಟ್​​ಗೆ ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಪ್ರತಿಕ್ರಿಯಿಸಿದ್ದಾರೆ‌.

ಮೇಘಾನಾ ರಾಜ್ ಮತ್ತು ಚಿರು ಸೆಲ್ಫಿ...

ಇದನ್ನೂ ಓದಿ:'ಪಾರು' ಧಾರಾವಾಹಿಯ ಖಳನಾಯಕಿ ಅನುಷ್ಕಾ ಪಾತ್ರ ಮುಕ್ತಾಯ

ಇನ್ನು ಇತ್ತೀಚೆಗೆ ಮೇಘನಾ ರಾಜ್ ತಮ್ಮ ಮಗನ 6 ತಿಂಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು. ಮೇಘನಾ ಮಗನಿಗೆ ಜೂ. ಚಿರು ಅಂತಾನೇ ಎಲ್ಲರೂ ಕರೆಯುತ್ತಿದ್ದಾರೆ. ಆದರೆ ಮೇಘನಾ ರಾಜ್​ಗೆ ಮಗನ ಜತೆ ಆಡುತ್ತಾ, ನಲಿಯುತ್ತಾ, ಆರೈಕೆ ಮಾಡುವುದರೊಂದಿಗೆ ಪತಿಯ ನೆನಪು ಕಾಡೋದು ಸಹಜ.

Last Updated : Apr 30, 2021, 11:48 AM IST

ABOUT THE AUTHOR

...view details