ಕರ್ನಾಟಕ

karnataka

ETV Bharat / sitara

'ಮಗುವಾಗಿ ನಿನ್ನನ್ನು ನೋಡಲು ಕಾಯುತ್ತಿದ್ದೇನೆ'...ಚಿರು ಬಗ್ಗೆ ಮೇಘನಾ ಭಾವನಾತ್ಮಕ ನುಡಿ - Latest news about Chiranjeevi sarja

ನಟಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಮೇಘನಾ ಕುಟುಂಬದವರು ಹಾಗೂ ಸ್ನೇಹಿತರನ್ನು ಮೇಘನಾ ಅವರನ್ನು ಸಂತೈಸಿದ್ದಾರೆ.

Meghana raj Emotional post about Chiru
ಚಿರು ಬಗ್ಗೆ ಮೇಘನಾ ಭಾವನಾತ್ಮಕ ನುಡಿ

By

Published : Jun 18, 2020, 2:08 PM IST

Updated : Jun 18, 2020, 2:47 PM IST

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ 12 ದಿನಗಳು ಕಳೆದಿವೆ. ನಿನ್ನೆಯಷ್ಟೇ ಕುಟುಂಬದವರು ಚಿರು ಅವರನ್ನು ಮಣ್ಣು ಮಾಡಲಾಗಿದ್ದ ಫಾರಂಹೌಸ್​​​ನಲ್ಲಿ 11ನೇ ದಿನದ ಪುಣ್ಯತಿಥಿ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.

ಚಿರಂಜೀವಿ ಸರ್ಜಾ, ಮೇಘನಾ ರಾಜ್

ನಿನ್ನೆ ಚಿರಂಜೀವಿ ಸರ್ಜಾ ಅವರ ಸೋದರ ಮಾವ ಅರ್ಜುನ್ ಸರ್ಜಾ ಚಿರು ಕುರಿತಾಗಿ ಒಂದು ಭಾವನಾತ್ಮಕ ಆಡಿಯೋ ಮಾಡಿದ್ದರು. ಇದೀಗ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಿರು ಅವರ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ಕೇಳಿದರೆ ಅರ್ಜುನ್ ಸರ್ಜಾ ಅವರಿಗೆ ತನ್ನ ಸೋದರಳಿಯನ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದು ತಿಳಿಯುತ್ತದೆ.

ಪತಿಯ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗದ ಮೇಘನಾ ರಾಜ್ 'ಮತ್ತೆ ಮಗುವಾಗಿ ಬಾ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ. ಪ್ರತಿ ದಿನ ನೀನು ಜೋರಾಗಿ ಮಾತನಾಡಿಕೊಂಡು ಬರುತ್ತಿದ್ದ ಬಾಗಿಲ ಕಡೆ ನೋಡಿದಾಗ ದು:ಖ ಉಮ್ಮಳಿಸಿ ಬರುತ್ತಿದೆ. ನೀನು ನನಗೆ ಎಲ್ಲಾ ಆಗಿದ್ದೆ. ನನ್ನ ನನ್ನ ಗೆಳೆಯ, ನನ್ನ ಪ್ರಿಯಕರ, ನನ್ನ‌ ಪಾಲುದಾರ, ನನ್ನ ಮಗು, ನನ್ನ ಪತಿ, ನನ್ನ ಮಾರ್ಗದರ್ಶಿ, ಇದೆಲ್ಲದಕ್ಕಿಂತ ಹೆಚ್ವಾಗಿ ನೀನು ನನ್ನ ಆತ್ಮದ ಒಂದು ಭಾಗ. ನೀನು ನನ್ನ ಸುತ್ತಲೂ ಇರುವೆ ಎಂದು ನನಗೆ ಭಾಸವಾಗುತ್ತಿದೆ. ಏಕೆಂದರೆ ನನ್ನನ್ನು ನೀನು ಒಂಟಿಯಾಗಿ ಬಿಡಲು ಸಾಧ್ಯವೇ ಇಲ್ಲ. ಮಗುವಾಗಿ ನಿನ್ನನ್ನು ಮರಳಿ ಪಡೆಯುವುದಕ್ಕೆ ನನ್ನಿಂದ ಕಾಯಲು ಆಗುತ್ತಿಲ್ಲ' ಎಂದು ಮೇಘನಾ ಬಹಳ ಭಾವಪೂರ್ಣವಾಗಿ ಬರೆದುಕೊಂಡು ತಮ್ಮೊಳಗಿನ ದು:ಖವನ್ನು ಹೊರಹಾಕಿದ್ದಾರೆ. ಮೇಘನಾ ಪೋಸ್ಟ್ ನೋಡಿ ಸ್ನೇಹಿತರು ಅವರನ್ನು ಸಂತೈಸುತ್ತಿದ್ದಾರೆ.

ಚಿರು ಜೊತೆ ಮೇಘನಾ
Last Updated : Jun 18, 2020, 2:47 PM IST

ABOUT THE AUTHOR

...view details