ಸೋಷಿಯಲ್ ಮೀಡಿಯಾದಲ್ಲಿ ತನ್ನ ಮುದ್ದಾದ ನಗುವಿನಿಂದಲೇ ಸ್ಟಾರ್ ಆಗಿರುವ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ತಮ್ಮ ಅಜ್ಜಿಯ ಮನೆಯಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಿದ್ದು, ಹಬ್ಬದ ಸುಂದರ ಕ್ಷಣಗಳನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ವಿಜಯ ದಶಮಿಗೆ ನಮ್ಮ ಅಜ್ಜಿ ಮನೆಯಲ್ಲಿ ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ. ನಮ್ಮ ಕುಟುಂಬಕ್ಕೆ ದಸರಾ ಹಬ್ಬ ಯಾವಾಗಲೂ ವಿಶೇಷವಾದದ್ದು. ನನ್ನ ಮಗ ರಾಯನ್ ರಾಜ್ ಸರ್ಜಾ ಮೊದಲ ವರ್ಷದ ವಿಜಯದಶಮಿಯ ಸಂಭ್ರಮದಲ್ಲಿದ್ದಾನೆ. ರಾಯನ್ ಹಿಂದೆ ಕಾಣುತ್ತಿರುವ ಬೊಂಬೆಗಳೆಲ್ಲ 45 ವರ್ಷಗಳ ಹಿಂದಿನ ಕಾಲದ ಹಳೆಯದು ಎಂದು ಮೇಘನಾ ರಾಜ್ ತಿಳಿಸಿದ್ದಾರೆ.
ರಾಯನ್ ರಾಜ್ ಸರ್ಜಾ ದಸರಾ ಸಂಭ್ರಮ ಅಷ್ಟೇ ಅಲ್ಲ ಮುಂದಿನ ವರ್ಷ ಇನ್ನಷ್ಟು ಒಳ್ಳೆಯ ಕಾಲ ಬರಲಿದೆ ಎಂಬ ಭರವಸೆಯೊಂದಿಗೆ ಈ ಬೊಂಬೆಗಳನ್ನು ಪ್ರತಿ ವರ್ಷ ಕಾಳಜಿಯಿಂದ ಎತ್ತಿಡಲಾಗುತ್ತದೆ. ಕಳೆದ ವರ್ಷ ರಾಯನ್ ಜನಿಸಿದ್ದು ನವರಾತ್ರಿ ಸಂದರ್ಭದಲ್ಲಿ. ಹಾಗಾಗಿ ಈ ಹಬ್ಬ ನನಗೆ ಇನ್ನಷ್ಟು ಸ್ಪೆಷಲ್ ಅಂತಾ ಮೇಘನಾ ರಾಜ್ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಯಲ್ಲಿ ಅವರು ಹಂಚಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.
ರಾಯನ್ ರಾಜ್ ಸರ್ಜಾ ದಸರಾ ಸಂಭ್ರಮ ಇನ್ನು ರಾಯನ್ಗೆ ಒಂದು ವರ್ಷ ಆಗ್ತಾ ಇರೋ ಕಾರಣ, ಪೂರ್ಣ ಪ್ರಮಾಣವಾಗಿ ಸಿನಿಮಾದಲ್ಲಿ ನಟಿಸಲು ಮೇಘನಾ ಸಜ್ಜಾಗಿದ್ದಾರೆ. ಅಕ್ಟೋಬರ್ 17ರಂದು ಚಿರಂಜೀವಿ ಸರ್ಜಾ ಹುಟ್ಟು ಹಬ್ಬದೊಂದು ಮೇಘನಾ ರಾಜ್ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಸೆಟ್ಟೇರಲಿದೆ.