ಸದಾ ಹೊಸ ಪ್ರಯತ್ನದಲ್ಲೇ ತೊಡಗಿಕೊಂಡಿರುವ ನಿರ್ದೇಶಕ ಅರವಿಂದ್ ಕೌಶಿಕ್ ಗೆಲುವು-ಸೋಲಿನ ಬಗ್ಗೆ ಯೋಚನೆ ಮಾಡುವವರಲ್ಲ. ಹಾಗೆ ನೋಡಿದರೆ ಬಾಕ್ಸ್ ಆಫೀಸ್ನಲ್ಲಿ ಅವರ ಎಲ್ಲಾ ಸಿನಿಮಾಗಳು ‘ಗಾನ್ ಕೇಸ್’ ಅಂತಲೇ ಹೇಳಬಹುದು.
ಅರವಿಂದ್ ಕೌಶಿಕ್ ‘ಗಾನ್ ಕೇಸ್’ ಚಿತ್ರಕ್ಕೆ ಮೇಘನಾ ಗಾಂವಕರ್ ನಾಯಕಿ - ಅರವಿಂದ್ ಕೌಶಿಕ್
ಗೆಲುವು-ಸೋಲಿನ ಬಗ್ಗೆ ಯೋಚನೆ ಮಾಡದ ಅರವಿಂದ್ ಕೌಶಿಕ್ ನಿರ್ದೇಶನದ ‘ಗಾನ್ ಕೇಸ್’ ಚಿತ್ರಕ್ಕೆ ಮೇಘನಾ ಗಾಂವಕರ್ ನಾಯಕಿಯಾಗಿದ್ದಾರೆ.
ಅರವಿಂದ್ ಕೌಶಿಕ್ ಸಹಾಯಕ ನಿರ್ದೇಶಕ ಆಗಿ ಜೂಟ್, ಎಕ್ಸ್ಕ್ಯೂಸ್ ಮೀ, ನೆನಪಿರಲಿ, 7 ಓ ಕ್ಲಾಕ್ ಸಿನಿಮಾಗಳ ನಂತರ ‘ನಮ್ ಏರಿಯಾದಲ್ ಒಂದ್ ದಿನ’ ಸಿನಿಮಾ ಮಾಡಿದ್ದಾರೆ. ನಿರ್ದೇಶಕನ ಪಟ್ಟ ಆಕ್ರಮಿಸಿದ ನಂತರ ತುಘಲಕ್, ಕಾಫಿ ವಿತ್ ಮೈ ವೈಫ್, ಶಾರ್ದೂಲ ಹಾಗೂ ಹುಲಿರಾಯ ಸಿನಿಮಗಳು ಅವರಿಗೆ ಯಶಸ್ಸು ತಂದುಕೊಡಲಿಲ್ಲ. ಈಗ ಅವರ ಮುಂದಿನ ಸಿನಿಮಾದ ಶೀರ್ಷಿಕೆ ಹೆಸರೇ ‘ಗಾನ್ ಕೇಸ್’ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೇಘನಾ ಗಾಂವಕರ್ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ಕ್ರೈಂ ಥ್ರಿಲ್ಲರ್ ಕಥಾ ವಸ್ತು ಆಯ್ಕೆ ಮಾಡಿದ್ದಾರೆ ಅರವಿಂದ್ ಕೌಶಿಕ್. ಅಪರಾಧ ಲೋಕವನ್ನು ಒಂದು ಮದುವೆ ಮನೆಗೆ ತಂದು ಕುತೂಹಲ ಕಟ್ಟಿಕೊಡಲಿದ್ದಾರೆ. ಇಲ್ಲಿ ಐದು ಟ್ರ್ಯಾಕ್ಗಳಲ್ಲಿ ಸಿನಿಮಾ ಸಾಗುತ್ತದೆ. ಆಧುನಿಕ ಟ್ರ್ಯಾಕ್ನಲ್ಲಿ ಮೇಘನಾ ಗಾಂವಕರ್ ಪಾತ್ರ ಕಾಣಿಸಿಕೊಳ್ಳುತ್ತದೆ. ಸಿದ್ದಾರ್ತ್ ಮಾಧ್ಯಮಿಕ, ಹಿತ ಚಂದ್ರಶೇಖರ್, ಅನಿತಾ ಭಟ್, ಸ್ನೇಹಿತ್ ಗೌಡ ಹಾಗೂ ಇತರರು ತಾರಗಣದಲ್ಲಿರಲಿದ್ದಾರೆ.