ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು, ಹೊಸ ನಟರು ಹಾಗೂ ನಿರ್ದೇಶಕರ ಎಂಟ್ರಿ ಆಗ್ತಾನೆ ಇದೆ. ಈಗ ಜೊತೆ ಜೊತೆಯಲ್ಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ಜೊತೆ ಯುವ ನಟ ಕವೀಶ್ ಶೆಟ್ಟಿ ಸಿನಿಮಾ ಮಾಡಲು ಮುಂದಾಗಿದ್ದು, ಹೆಸರಿಡದ ಚಿತ್ರವನ್ನ ನಿರ್ದೇಶಕ ಸಡಗರ ರಾಘವೇಂದ್ರ ನಿರ್ದೇಶಿಸಲಿದ್ದಾರೆ.
ಚೊಚ್ಚಲ ನಿರ್ದೇಶನದಲ್ಲಿ ರಾಘವೇಂದ್ರ ಈ ಚಿತ್ರವನ್ನ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷೆಯಲ್ಲಿ ಅದ್ದೂರಿಯಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಹಿಂದೆ ‘ಜಿಲ್ಕ’ ಸಿನಿಮಾ ಮಾಡಿದ ಕವೀಶ್ ಶೆಟ್ಟಿ, ಹೆಸರಿಡದ ಈ ಚಿತ್ರಕ್ಕಾಗಿ ಸತತವಾಗಿ ಜಿಮ್ಮಿನಲ್ಲಿ ಬೆವರು ಹರಿಸುತ್ತಾ ಫೈಟ್ ಮತ್ತು ಡ್ಯಾನ್ಸ್ ರಿಹರ್ಸಲ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದೊಂದು ಅಪ್ಪಟ ಔಟ್ ಅಂಡ್ ಔಟ್ ಮಾಸ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಎನ್ನುವ ಸುಳಿವು ದೊರೆಯುತ್ತಿದೆ.