ಕರ್ನಾಟಕ

karnataka

ETV Bharat / sitara

ಮಗಧೀರ ಸಿನಿಮಾ ನೋಡಿ ನನಗೆ ಜಲಸ್ ಆಗಿತ್ತು ಎಂದ ಮೆಗಾಸ್ಟಾರ್...! - Megastar Chiranjeevi

ನೀವು‌ ಜೀವನದಲ್ಲಿ ಏನನ್ನು ಸಾಧಿಸಿದ್ದೀರಿ ಎಂದು ಎಲ್ಲರೂ ನನ್ನನ್ನು ಕೇಳಬಹುದು. ರಾಮ್​ಚರಣ್‌ನಂತಹ‌ ಮಗನನ್ನು ಪಡೆದಿದ್ದೇನೆ‌ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ.

Saira Narasimha Reddy

By

Published : Oct 1, 2019, 11:59 AM IST

ರಾಮ್ ಚರಣ್ ತೇಜ್​ ನಟನೆಯ ಮಗಧೀರ ಸಿನಿಮಾ‌ ನೋಡಿ ನಾನು ಜಲಸ್(ಹೊಟ್ಟೆಕಿಚ್ಚು) ಆಗಿತ್ತು ಎಂದು ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಪ್ರಿ ರಿಲೀಸ್ ಈವೆಂಟ್​ನಲ್ಲಿ ತಮಾಷೆಯಿಂದ ಹೇಳಿದ್ರು.

ರಾಮ್ ಚರಣ್ ಅಂತ ಮಗನನ್ನ ಪಡೆದಿರೋದಕ್ಕೆ ನನಗೆ ಹೆಮ್ಮೆ ಇದೆ

ಮಗಧೀರ ಚಿತ್ರದಲ್ಲಿ ನನ್ನ ಮಗ ಚರಣ್ ರೀತಿಯಲ್ಲಿ ಕಾಸ್ಟ್ಯೂಮ್ಸ್ ಡ್ರಾಮಾ ಮಾಡಬೇಕು, ಕತ್ತಿ ಹಿಡಿದು ಹೋರಾಡಬೇಕು ಅನ್ನೋ ಆಸೆ ಬಹು ದಿನಗಳಿಂದ ಇತ್ತು. ಆದ್ರೆ 150 ಸಿನಿಮಾವರೆಗೂ ನನಗೆ ಆ ಛಾನ್ಸ್ ಬರಲಿಲ್ಲ. ನಿನಗೆ ಎರಡನೇ ಸಿನಿಮಾದಲ್ಲೇ ರಾಜಮೌಳಿಯಂತಹ ದೊಡ್ಡ ನಿರ್ದೇಶಕ ಸಿಕ್ಕಿದ್ದು, ಅದ್ಭುತವಾಗಿ ನಟಿಸಿದ್ದೀಯಾ. ಆ ಕ್ಯಾರೆಕ್ಟರ್ ನೋಡಿ ನನಗೆ ಅಂತ ಅವಕಾಶ ಬರಲಿಲ್ಲವಲ್ಲಾ ಅಂತ ನಿರಾಸೆ ಆಗಿತ್ತು. ಆದರೆ, ಚರಣ್​ಗೆ ಮಾತ್ರ ಆ ಆಲೋಚನೆ ಹಾಗೆ ಉಳಿದು ಹೋಗಿತ್ತು. ಅಪ್ಪನಿಗೆ ಅದೊಂತರ‌ ಮಿಸ್ಸಿಂಗ್, ಅಂತಹ‌ ಕ್ಯಾರೆಕ್ಟರ್ ಮಾಡಿಲ್ಲ ಅನ್ನೋ ಲೋಪ ಇರಬಾರದು ಅಂತ, ಇಷ್ಟು ವರ್ಷಗಳ ನಂತ್ರ ಇದನ್ನ ಮತ್ತೆ ಯಾರೋ ಮಾಡೋದು ಬೇಡ. ಆ ರಿಸ್ಕ್​ಅನ್ನು ನಾವೇ ತೆಗೆದುಕೊಳ್ಳೋಣ. ಸಿನಿಮಾವನ್ನು ನಾವೇ ನಿರ್ಮಿಸೋಣ ಅಂತ, ಅವನು ನನಗೆ ಸೈರಾ ನರಸಿಂಹರೆಡ್ಡಿ ಸಿನಿಮಾ ಮೂಲಕ ಅದ್ಭುತವಾದ ಗಿಫ್ಟ್ ಕೊಟ್ಟಿದ್ದಾನೆ.

ಯಾವುದೇ ತಂದೆ ತನ್ನ ಮಗನನ್ನ ಬೆಳಕಿಗೆ ತರುತ್ತಾನೆ. ಆದ್ರೆ ಇಲ್ಲಿ ಮಗನೇ ತಂದೆಯನ್ನು ಸ್ಟಾರ್ ಆಗಿ ಪ್ರೇಕ್ಷಕರಿಗೆ ಹತ್ತಿರ ಮಾಡಬೇಕು ಅಂತ ಪ್ರಯತ್ನಿದ್ದಾನೆ. ಆದ್ರೆ ಇಲ್ಲಿ ನನ್ನ ಮಗ ನನ್ನ ಕೋರಿಕೆಯನ್ನ ಈಡೇರಿಸಿ, ನನ್ನನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವಂತೆ ಹಾಗು ನನಗೆ ಅದ್ಭುತವಾದ ಪಾತ್ರ ನೀಡಿ ನನ್ನ ಸಿನಿ ಜೀವನದಲ್ಲಿ ಉಳಿಯುವಂತೆ ಮಾಡಿರುವ ರಾಮ್ ಚರಣ್​ಗೆ ಈ ಸಭೆಯ ಮುಖಾಂತರ I love u ಹೇಳುತ್ತೇನೆ ಎಂದರು. ಇವನು ನನ್ನ ಹೆಮ್ಮೆಯ ಮಗ. ಯಾರಾದ್ರು ಚಿರಂಜೀವಿ ನೀನು ಏನು ಸಾಧಿಸಿದ್ದಿಯಾ ಅಂದ್ರೆ ಆಫ್ ಕೋರ್ಸ್ ಅಭಿಮಾನಿಗಳನ್ನ ಸಾಧಿಸಿದ್ದೇನೆ ಅಂತ ಹೇಳ್ತಿನಿ.. ಅದ್ರೀಗ ಅಭಿಮಾನಿಗಳು ಮುಂದೆ ಏನು ಸಾಧಿಸಿದ್ದೀಯ ಅಂತಾ ಕೇಳಿದ್ರೆ ರಾಮ್ ಚರಣ್ ಅಂತಹ ಒಳ್ಳೆ ಮಗನನ್ನ ಪಡೆದಿರುವುದಾಗಿ ಹೇಳ್ತಿನಿ ಎಂದು ಮೆಗಾ ಸ್ಟಾರ್​ ಚಿರಂಜೀವಿ ತಿಳಿಸಿದ್ರು.

ABOUT THE AUTHOR

...view details