ತೆಲುಗಿನ ಮೆಗಾ ಸ್ಟಾರ್ ಜಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದಲ್ಲಿ ರಾಮ್ಚರಣ್ ನಟಿಸುತ್ತಾರೋ? ಇಲ್ಲವೋ? ಎಂಬ ಚರ್ಚೆಗಳು ಬಹಳ ದಿನಗಳಿಂದಲೂ ನಡೆಯುತ್ತಿದ್ದು, ಆ ಚರ್ಚೆಗೆ ಇಂದು ಅಂತಿಮವಾಗಿ ತೆರೆ ಬಿದ್ದಿದೆ. ಕೊನೆಗೂ ರಾಮ್ಚರಣ್ ಆಚಾರ್ಯ ಚಿತ್ರೀಕರಣಕ್ಕೆ ಭಾನುವಾರದಿಂದ ಎಂಟ್ರಿ ಆಗಿದ್ದಾರೆ.
ಕೊರಳಿಗೆ ರುದ್ರಾಕ್ಷಿ ಧರಿಸಿ 'ಆಚಾರ್ಯ'ನ ಅಂಗಳಕ್ಕೆ ಬಂದ 'ಸಿದ್ಧ' - ರಾಮ್ಚರಣ್ ಸುದ್ದಿ
ಮೆಗಾ ಸ್ಟಾರ್ ಜಿರಂಜೀವಿ ನಟನೆಯ 'ಆಚಾರ್ಯ ಸಿನಿಮಾ ಶೂಟಿಂಗ್ಗೆ ರಾಮ್ಚರಣ್ ಭಾನುವಾರದಿಂದ ಎಂಟ್ರಿ ಆಗಿದ್ದಾರೆ.

ಕೊರಳಿಗೆ ರುದ್ರಾಕ್ಷಿ ಧರಿಸಿ 'ಆಚಾರ್ಯ'ನ ಅಂಗಳಕ್ಕೆ ಬಂದ 'ಸಿದ್ಧ'
ಈ ಬಗ್ಗೆ ಸ್ವತಃ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಮಾಹಿತಿ ನೀಡಿದ್ದು, ಆಚಾರ್ಯ ಸಿನಿಮಾ ಚಿತ್ರೀಕರಣದ ಸೆಟ್ಗೆ ರಾಮ್ಚರಣ್ ಅವರಿಗೆ ಸ್ವಾಗತ ಎಂದು ಬರೆದಿದ್ದಾರೆ.
ರಾಮ್ಚರಣ್ ಅವರ ಫೋಟೋ ಒಂದನ್ನು ಹಂಚಿಕೊಂಡಿರುವ ನಿರ್ದೇಶಕ ಅದ್ರಲ್ಲಿ ರಾಮ್ಚರಣ್ ರುದ್ರಾಕ್ಷಿ ಮಾಲೆ ಧರಿಸಿ, ಕಿವಿಗೆ ಓಲೆ ಹಾಕಿದ್ದಾರೆ. ಚಿತ್ರತಂಡದ ಮಾಹಿತಿ ಪ್ರಕಾರ ಆಚಾರ್ಯ ಸಿನಿಮಾದಲ್ಲಿ ರಾಮ್ಚರಣ್ 'ಸಿದ್ಧ'ರ ಪಾತ್ರವನ್ನು ಮಾಡುತ್ತಾರಂತೆ.