ಬಹುಭಾಷ ನಟಿ ಮೀರಾ ಚೋಪ್ರಾಗೆ ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಂದ ಸಾಮೂಹಿಕ ಅತ್ಯಾಚಾರದ ಬೆದರಿಗೆ ಬಂದಿದೆ. ಇತ್ತೀಚೆಗೆ ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂವಾದದಲ್ಲಿ ಜೂನಿಯರ್ ಎನ್ಟಿಆರ್ ಬಗ್ಗೆ ಮೀರಾ ಚೋಪ್ರಾ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಟಿ ತಮಗೆ ಕಿರುಕುಳ ನೀಡಿದವರ ವಿರುದ್ಧ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ.
#askmeera (ಆಸ್ಕ್ ಮೀರಾ) ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ನಟಿಯು ಟ್ವಿಟರ್ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ಕೆಲವರು ನಿಮಗೆ ತೆಲುಗು ಸಿನಿಮಾ ರಂಗದಲ್ಲಿ ನೆಚ್ಚಿನ ನಟ ಯಾರು? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೀರಾ, ನನಗೆ ಮಹೇಶ್ ಬಾಬು ಅಂದ್ರೆ ಇಷ್ಟ ಅಂತ ಹೇಳಿದ್ದಾರೆ.
ಇದೇ ವೇಳೆ, ಒಂದಷ್ಟು ಜನ, ಜ್ಯೂ.ಎನ್ ಟಿಆರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಮೀರಾ ಚೋಪ್ರಾ, ಅವರು ಯಾರು ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದಿದ್ದಾರೆ.