ಹುಬ್ಬಳ್ಳಿ ಹುಡುಗಿ ಮಯೂರಿ ಕ್ಯಾತರಿ ‘ಅಶ್ವಿನಿ ನಕ್ಷತ್ರ ‘ ಧಾರವಾಹಿ ಮೂಲಕ ಬೆಳಕಿಗೆ ಬಂದ ನಕ್ಷತ್ರ. ಈ ಧಾರವಾಹಿ ನಂತರ ಸಿನಿಮಾಗಳಲ್ಲೂ ನಟಿಸಲು ಅವಕಾಶ ಪಡೆದ ಮಯೂರಿ ‘ಕೃಷ್ಣಲೀಲ‘ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕೂಡಾ ಕಾಲಿಟ್ಟರು.
ಇದು ಹುಬ್ಬಳ್ಳಿ ಹುಡುಗಿಯರ 'ಮೌನಂ'.. ಕೃಷ್ಣ'ಲೀಲಾ' ಮಯೂರಿ ಮತ್ತೆ ಬಂದ್ರೂರೀ.. - undefined
ಮಯೂರಿ ಅಭಿನಯದ ‘ಮೌನಂ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಶೀಘ್ರವೇ ಸಿನಿಮಾ ಸೆನ್ಸಾರ್ ಮುಂದೆ ಹಾಜರಾಗಲಿದೆ. ಚಿತ್ರದಲ್ಲಿ ಮಯೂರಿ ಎರಡು ವಿಭಿನ್ನ ಶೇಡ್ಗಳಲ್ಲಿ ನಟಿಸಿದ್ದಾರೆ.
![ಇದು ಹುಬ್ಬಳ್ಳಿ ಹುಡುಗಿಯರ 'ಮೌನಂ'.. ಕೃಷ್ಣ'ಲೀಲಾ' ಮಯೂರಿ ಮತ್ತೆ ಬಂದ್ರೂರೀ..](https://etvbharatimages.akamaized.net/etvbharat/prod-images/768-512-3284621-thumbnail-3x2-mayuri.jpg)
ಆ ನಂತರ ನಟರಾಜ ಸರ್ವೀಸ್, ಕರಿಯ-2, ರ್‍ಯಾಂಬೋ-2, ನನ್ನ ಪ್ರಕಾರ, ರುಸ್ತುಂ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಪೊಗರು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸಿದರು. ‘ಇಷ್ಟ ಕಾಮ್ಯ’ ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಪಡೆದ ಮಯೂರಿ, ನವರಸ ನಾಯಕ ಜಗ್ಗೇಶ್ ಅಭಿನಯದ 8 ಎಂಎಂ ಸಿನಿಮಾದಲ್ಲೂ ಕೂಡಾ ಮಿಂಚಿದರು. ಇದೀಗ ಅವರು ‘ಮೌನಕ್ಕೆ’ ಜಾರಿದ್ದಾರೆ. ಹೌದು, ಮಯೂರಿ ಅಭಿನಯದ ‘ಮೌನಂ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಎರಡು ವಿಭಿನ್ನ ಶೇಡ್ಗಳಲ್ಲಿ ಮಯೂರಿ ಈ ಚಿತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಹಿರಿಯ ನಟ ಅವಿನಾಶ್ ಆರು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ರೀತಿಯ ಪಾತ್ರ ಅವಿನಾಶ್ ವೃತ್ತಿ ಬದುಕಿನಲ್ಲೇ ಮೊದಲು.
‘ಮೌನಂ’ ಒಂದು ಹೋರಾಟದ ಸಿನಿಮಾ. ಹೋರಾಟ ಎಂಬುದು ಮನುಷ್ಯನಲ್ಲೇ ಮೊದಲು ಆಗಬೇಕು. ಮನುಷ್ಯನಲ್ಲಿರುವ ಶತ್ರುತ್ವ ಮೊದಲು ತೊಲಗಬೇಕು ಎಂದು ಸಾರುವ ಸಿನಿಮಾ ಇದು. ನಿಹಾರಿಕಾ ಮೂವೀಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ರಾಜ್ ಪಂಡಿತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ ಮತ್ತು ಗುರುಮೂರ್ತಿ ಹೆಗ್ಗಡೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಆರಾವ್ ರಿಶಿಕ್ ಸಂಗೀತ ನೀಡಿದ್ದು ಶ್ರೀಘ್ರವೇ ಸೆನ್ಸಾರ್ ಮುಂದೆ ಹೋಗಲಿದೆ.