ಹೊಸ ವರ್ಷದ ಆರಂಭದಲ್ಲೇ ಸಿನಿ ರಸಿಕರ ಮನರಂಜಿಸೋಕೆ ನಟ ಮಯೂರ್ ಪಟೇಲ್ ರೆಡಿಯಾಗಿದ್ದಾರೆ. ತುಂಬಾ ವರ್ಷಗಳ ನಂತ್ರ ಮಯೂರ್ ಪಟೇಲ್ ನಾಯಕನಾಗಿ ನಟಿಸಿರುವ 'ರಾಜೀವ' ಚಿತ್ರ ಹೊಸ ವರ್ಷದ ಆರಂಭದಲ್ಲೇ ಥಿಯೇಟರ್ಗೆ ಲಗ್ಗೆ ಇಡ್ತಿದೆ.
ಜನವರಿ 3 ರಂದು 'ರಾಜೀವ' ಚಿತ್ರ ಸುಮಾರು150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಧ್ಯಮಗೋಷ್ಟಿ ನಡೆಸಿ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಚಿತ್ರತಂಡ ಈಗಾಗಲೇ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದು, ಹೊಸ ವರ್ಷವನ್ನು ವೆಲ್ಕಮ್ ಮಾಡಿಕೊಂಡು ಸಂಭ್ರಮದಲ್ಲಿರುವ ಕನ್ನಡಿಗರನ್ನು ರಿಲ್ಯಾಕ್ಸ್ ಮೂಡ್ಗೆ ಕರೆದೊಯ್ಯಲು ಮಯೂರ್ ಬರ್ತಿದ್ದಾರೆ.