ಕರ್ನಾಟಕ

karnataka

ETV Bharat / sitara

ಚಿರು-ಮೇಘನಾ ನಿಶ್ಚಿತಾರ್ಥದ ದಿನದಂದೇ ಸರ್ಜಾ ಫ್ಯಾಮಿಲಿಗೆ ಜೂನಿಯರ್​​​ ಆಗಮನದ ನಿರೀಕ್ಷೆ! - Meghana raj latest News

2017 ಅಕ್ಟೋಬರ್ 22ರಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಎಂಗೇಜ್​ಮೆಂಟ್ ನಡೆದಿತ್ತು. ಹೀಗಾಗಿ ಈ ದಿನವೇ ಮೇಘನಾ ರಾಜ್ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸರ್ಜಾ ಫ್ಯಾಮಿಲಿ ಜ್ಯೂನಿಯರ್​ ಆಗಮನ
ಸರ್ಜಾ ಫ್ಯಾಮಿಲಿ ಜ್ಯೂನಿಯರ್​ ಆಗಮನ

By

Published : Oct 22, 2020, 10:33 AM IST

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದೆ‌. ತಾಯ್ತನದ ಹೊಸ್ತಿಲಲ್ಲಿರೋ ಮೇಘನಾ ರಾಜ್, ನಿನ್ನೆಯಷ್ಟೇ ಕೆ.ಆರ್ ರಸ್ತೆಯಲ್ಲಿರೋ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇಘನಾ ರಾಜ್ ದಾಖಲಾಗಿರುವ ಅಕ್ಷ ಆಸ್ಪತ್ರೆಯ ಒಂದು ವಾರ್ಡ್​ನಲ್ಲಿ ಚಿರಂಜೀವಿ ಸರ್ಜಾ ಫೋಟೋ ಹಾಕಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆಸ್ಪತ್ರೆ ವಾರ್ಡ್​ನಲ್ಲಿ ಫೋಟೋ

ಕಳೆದ ಮೂರು ತಿಂಗಳಿಂದ ಈ ವಾರ್ಡ್​ಅನ್ನು ಮೇಘನಾ ರಾಜ್ ರಿಸರ್ವ್ ಮಾಡಿದ್ರಂತೆ. ಇನ್ನು ಮೇಘನಾ ರಾಜ್ ಇರುವ ವಾರ್ಡ್​ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಚಿರಂಜೀವಿ ಸರ್ಜಾ ಫೋಟೋ ಹಾಕಿ ಮನೆಯಂತೆ ರೆಡಿ ಮಾಡಿದ್ದಾರೆ. ಚಿರು ಆಗಲಿಕೆ ನಂತರ ಪ್ರತಿಕ್ಷಣ ಚಿರು ನೆನಪಲ್ಲೇ ಇರುವ ಮೇಘನಾ, ಸೀಮಂತದ ವೇಳೆಯೂ ಚಿರು ಫೋಟೋ ಸ್ಟ್ಯಾಂಡ್ ನಿಲ್ಲಿಸಿ ಪತಿ ನನ್ನ ಜೊತೆ ಇದ್ದಾರೆ ಎಂಬ ಭಾವನೆಯಲ್ಲಿ ಸೀಮಂತ ಮಾಡಿಕೊಂಡಿದ್ದರು.

ಚಿರು-ಮೇಘನಾ

2017 ಅಕ್ಟೋಬರ್ 22ರಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಎಂಗೇಜ್​ಮೆಂಟ್ ನಡೆದಿತ್ತು. ಹೀಗಾಗಿ ಈ ದಿನವೇ ಮೇಘನಾ ರಾಜ್ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಂದು ಸಂಜೆಯ ಹೊತ್ತಿಗೆ ಮೇಘನಾ ರಾಜ್ ಹಾಗೂ ಸರ್ಜಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆ ಇದೆ‌.

ABOUT THE AUTHOR

...view details