ಮಥುರಾ :ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ, ಮುಂಬೈನ ತಮ್ಮ ಖಾಸಗಿ ನಿವಾಸದಲ್ಲಿ ವೈದಿಕ ಪಠಣಗಳೊಂದಿಗೆ 'ಹವನ' ನೆರವೇರಿಸಿದರು.
ಓದಿ: ಇಷ್ಟು ಸಾಕಾಗದು, ಇನ್ನಷ್ಟು ಊಟ ಕೊಡಿ; ಜೈಲು ಆಧಿಕಾರಿಗಳಿಗೆ ಸುಶೀಲ್ ಕುಮಾರ್ ಮೊರೆ
ಸಾಂಪ್ರದಾಯಿಕ ಹವನ ಮಾಡಲು ಎಲ್ಲಾ ಸಮುದಾಯದ ಜನರಿಗೆ ಮನವಿ ಮಾಡಿದರು. ಹವನ ಮಾಡುವ ಮೂಲಕ ಮನೆ ಪರಿಸರ ಸುಂದರವಾಗುವ ಜೊತೆಗೆ, ಸುತ್ತಮುತ್ತಲಿನ ಪರಿಸರವೂ ಶುದ್ಧವಾಗಿರುತ್ತದೆ.
ಮನೆಯಲ್ಲಿ ಹವನ ಮಾಡುವುದು ಹಾನಿಕಾರಕವಲ್ಲ, ಅದು ಕುಟುಂಬದ ವಾತಾವರಣ ಮತ್ತು ನೈಸರ್ಗಿಕ ಪರಿಸರವನ್ನು ಶುದ್ಧೀಕರಿಸುತ್ತದೆ ಎಂದು ಹೇಳಿದರು. ಬೇವಿನ ಎಲೆಗಳು, ಹವನ ವಸ್ತು, ಲವಂಗ, ಕರ್ಪೂರ, ಸಕ್ಕರೆ, ಆರೊಮ್ಯಾಟಿಕ್ ವಸ್ತುಗಳಿಂದ ಹವನ ಮಾಡಬಹುದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ನಿರಂತರವಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಾನು ಹವನ ಮಾಡುತ್ತೇನೆ. ನಮ್ಮ ದೇಶದಲ್ಲಿ ಹವನ ಮಾಡುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆಯುತ್ತಿದೆ. ಹವನ ಮಾಡುವ ಮೂಲಕ, ನೈಸರ್ಗಿಕ ಪರಿಸರವು ಶುದ್ಧವಾಗಿರುತ್ತದೆ. ಎಲ್ಲಾ ಸಮುದಾಯದ ಜನರು ಹವನ ಮಾಡುವುದು ಅವಶ್ಯಕ ಎಂದರು.
ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಮಹಾಮಾರಿ ಜನರ ಜೀವನವನ್ನು ಬುಡಮೇಲು ಮಾಡಿದೆ. ಜಾಗತಿಕ ಸಾಂಕ್ರಾಮಿಕ ರೋಗ ಪ್ರಕೃತಿಯಲ್ಲಿ ಹಾನಿಕಾರಕ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಪ್ರಕೃತಿಯನ್ನು ಸುಂದರವಾಗಿ ಮತ್ತು ಪರಿಶುದ್ಧವಾಗಿಸಲು ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲಿ ಹವನ ಮಾಡುವುದು ಅವಶ್ಯಕ. ಇದರಿಮದ ಯಾವಾಗಲೂ ಮನುಷ್ಯನಿಗೆ ಪ್ರಯೋಜನಕಾರಿಯಾಗಿದೆ ಎಂದರು.