29 ವರ್ಷಗಳ ನಂತರ ಅದೇ ಕೊಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’ ಅಂತ ಬಂದಿದ್ದಾರೆ. ಯುವ ನಟ ಪ್ರಮೋದ್ (ಪ್ರೀಮಿಯರ್ ಪದ್ಮಿನಿ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ನಟ) ಹಾಗೂ ನಟಿ ಮಿಲನ ನಾಗರಾಜ್ (ನಮ್ ದುನಿಯಾ ನಮ್ ಸ್ಟೈಲ್, ಬೃಂದಾವನ, ಚಾರ್ಲಿ, ಜಾನಿ, ಫ್ಲೈ ಹಾಗೂ ಎರಡು ಪರಭಾಷಾ ಸಿನಿಮಾಗಳ ನಟಿ) ಆಯ್ಕೆ ಮಾಡಿಕೊಂಡು, ಇದೇ ಗುರುವಾರ ಚಿತ್ರದ ಮುಹೂರ್ತ ಇಟ್ಟುಕೊಂಡಿದ್ದಾರೆ. ಆರ್.ಅಶೋಕ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಪತ್ರಕರ್ತ ಜೋಗಿ ಕ್ಯಾಮರಾ ಸ್ವಿಚ್ ಆನ್ ಮಾಡಲಿದ್ದಾರೆ.
'ಮತ್ತೆ ಉದ್ಭವ'ಕ್ಕೆ ಪ್ರಮೋದ್ ಜೊತೆ ಮಿಲನ ನಾಗರಾಜ್ - undefined
1990ರಲ್ಲಿ ಲೇಖಕ ಹಾಗೂ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರ ಕಥೆ ಆಧರಿಸಿ ನಿರ್ದೇಶಕ ಕೊಡ್ಲು ರಾಮಕೃಷ್ಣ ‘ಉದ್ಭವ’ ಸಿನಿಮಾ ಮಾಡಿ ಯಶಸ್ಸು ಪಡೆದಿದ್ದರು. ಅನಂತ್ ನಾಗ್, ಬಾಲಕೃಷ್ಣ, ಕೆ.ಎಸ್.ಅಶ್ವಥ್, ಸುಂದರ್ ರಾಜ್ ಅಭಿನಯದ ಈ ಸಿನಿಮಾ ಜನಪ್ರಿಯ ಆಗಲು ಹಲವಾರು ವಿಚಾರಗಳು ಕಾರಣವಾಗಿದ್ದವು.
!['ಮತ್ತೆ ಉದ್ಭವ'ಕ್ಕೆ ಪ್ರಮೋದ್ ಜೊತೆ ಮಿಲನ ನಾಗರಾಜ್](https://etvbharatimages.akamaized.net/etvbharat/prod-images/768-512-3465228-thumbnail-3x2-matte.jpg)
ಮತ್ತೆ ಉದ್ಭವ
ರಂಗಾಯಣ ರಘು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಇದೊಂದು ಪಕ್ಕಾ ಹಾಸ್ಯವೇ ಜೀವಾಳವಾಗಿರುವ ಚಿತ್ರ. ಈಗಿನ ಪೀಳಿಗೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ. ನಾಯಕಿ ಮಿಲನ ನಾಗರಾಜ್ ಎರಡು ಬಗೆಯ ಪಾತ್ರ ನಿಭಾಯಿಸಲಿದ್ದಾರೆ. ಅದರಲ್ಲಿ ಒಂದು ರಾಜಕಾರಿಣಿ ಪಾತ್ರ.
ಸುಧಾ ಬೆಳವಾಡಿ, ಮೋಹನ್, ಅವಿನಾಶ್, ಸತೀಶ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿದ್ದಾರೆ. ಮೋಹನ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಜಯಂತ್ ಕಾಯ್ಕಿಣಿ ಹಾಗೂ ಜೆ.ಎಂ.ಪ್ರಹ್ಲಾದ್ ಗೀತೆಗಳನ್ನು ರಚಿಸಿದ್ದಾರೆ. ವೈಟ್ ಪ್ಯಾಂಥರ್ಸ್ ಹಾಗೂ ಇನ್ಫಿನಿಟಿ ಫಿಲ್ಮ್ಸ್ ಮುಂಬೈ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದೆ.