ಕರ್ನಾಟಕ

karnataka

ETV Bharat / sitara

'ಮಾಸ್ಟರ್'​​​​ ಪೈರಸಿ ಮಾಡಿದ ಕಂಪನಿ ವಿರುದ್ಧ ಕೇಸ್​​​​​​​​..ಪರಿಹಾರವಾಗಿ ದೊಡ್ಡ ಮೊತ್ತಕ್ಕಾಗಿ ಡಿಮ್ಯಾಂಡ್​​​​​ - Vijay starring Master

ಜನವರಿ 13 ರಂದು ಬಿಡುಗಡೆಯಾದ 'ಮಾಸ್ಟರ್​' ಸಿನಿಮಾ ಪೈರಸಿ ಆಗಿದ್ದು ಇದಕ್ಕೆ ಕಾರಣವಾದ ಡಿಜಿಟಲ್ ಸಂಸ್ಥೆ ಮೇಲೆ ಚಿತ್ರತಂಡ ಪ್ರಕರಣ ದಾಖಲಿಸಿದ್ದು, 25 ಕೋಟಿ ರೂಪಾಯಿ ಪರಿಹಾರಕ್ಕಾಗಿ ಆಗ್ರಹಿಸಿದೆ.

Master movie Piracy
'ಮಾಸ್ಟರ್'​​​​

By

Published : Jan 20, 2021, 2:31 PM IST

ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಜನವರಿ 13 ರಂದು ತೆರೆ ಕಂಡಿತ್ತು. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಗಿಫ್ಟ್ ಎಂದು ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಂತೆ 'ಮಾಸ್ಟರ್'​​​​​ ಕೂಡಾ ಪೈರಸಿ ಆಗಿದ್ದು ಚಿತ್ರತಂಡ 25 ಕೋಟಿ ರೂಪಾಯಿ ಹಣಕ್ಕೆ ಆಗ್ರಹಿಸಿದೆ.

'ಮಾಸ್ಟರ್'​​​​

ಇದನ್ನೂ ಓದಿ:ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ ಶ್ರೀ ಜಗನ್ನಾಥದಾಸರ ಜೀವನಚರಿತ್ರೆ..!

ಲೋಕೇಶ್​ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಬಿಡುಗಡೆಗೂ ಒಂದು ದಿನ ಮುನ್ನವೇ ಪೈರಸಿ ಆಗಿದ್ದರಿಂದ ತಮಗೆ ದೊಡ್ಡ ನಷ್ಟವಾಗಿದೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್​​​ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಚಿತ್ರದ ಕಾಪಿಯನ್ನು ವಿದೇಶಕ್ಕೆ ಕಳಿಸಲು ಚಿತ್ರತಂಡ ಒಂದು ಡಿಜಿಟಲ್ ಸಂಸ್ಥೆಗೆ ಪ್ರಿಂಟ್​​​​ವೊಂದನ್ನು ನೀಡಿತ್ತು. ಆದರೆ ಪ್ರಿಂಟನ್ನು ದುರುಪಯೋಗಪಡಿಸಿಕೊಂಡ ಆ ಡಿಜಿಟಲ್ ಸಂಸ್ಥೆಗೆ ಸೇರಿದ ಒಬ್ಬ ವ್ಯಕ್ತಿ, ಪೈರಸಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆ ವ್ಯಕ್ತಿ ಹಾಗೂ ಕಂಪನಿ ಮೇಲೆ ಚಿತ್ರತಂಡ ಪ್ರಕರಣ ದಾಖಲಿಸಿದೆ. ನಮಗೆ ತೊಂದರೆ ನೀಡಿದ ಡಿಜಿಟಲ್ ಸಂಸ್ಥೆ 25 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು 'ಮಾಸ್ಟರ್' ಚಿತ್ರತಂಡ ಆಗ್ರಹಿಸುತ್ತಿದೆ.

ABOUT THE AUTHOR

...view details