ಕರ್ನಾಟಕ

karnataka

ETV Bharat / sitara

ಡ್ರಗ್ಸ್ ಮಾಫಿಯಾದಲ್ಲಿ ಸಿನಿಮಾ ನಟ-ನಟಿಯರು ಎಂದು ಪ್ರತ್ಯೇಕ ಮಾಡುವುದು ಸರಿಯಲ್ಲ: ಮಾಸ್ಟರ್ ಆನಂದ್ - Drug Mafia

ಡ್ರಗ್ಸ್ ಮಾಫಿಯಾದಲ್ಲಿ ಲಕ್ಷಾಂತರ ಜನರಿದ್ದಾರೆ. ಡ್ರಗ್ಸ್ ಸೇವನೆ ಮಾಡುವವರನ್ನು ಎಲ್ಲರನ್ನೂ ‌ಹಿಡಿಯಿರಿ. ಕೇವಲ ಸಿನಿಮಾ ನಟ-ನಟಿಯರಿಗಷ್ಟೇ ಮಾತ್ರ ಏಕೆ ಸೀಮಿತಗೊಳಿಸುತ್ತಿದ್ದಾರೆ ಎಂದು ನಟ ಮಾಸ್ಟರ್ ಆನಂದ್ ಪ್ರಶ್ನೆ ಮಾಡಿದ್ದಾರೆ.

Master Anand Reaction About Drug Mafia
ಮಾಸ್ಟರ್ ಆನಂದ್

By

Published : Aug 31, 2020, 11:46 PM IST

Updated : Sep 1, 2020, 10:34 AM IST

ಬಾಗಲಕೋಟೆ :ಡ್ರಗ್ಸ್ ಎಂಬುದು ಚಟ. ಇದು ಇಡೀ ಮನುಕುಲಕ್ಕೆ ಸಂಬಂಧಿಸಿದ್ದು. ಕೇವಲ ಸಿನಿಮಾ ನಟ-ನಟಿಯರು ಎಂದು ಪ್ರತ್ಯೇಕ ಮಾಡುವುದು ಸರಿಯಲ್ಲ ಎಂದು ಕಿರುತೆರೆ ಹಾಗೂ ನಟ ಮಾಸ್ಟರ್ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಇಳಕಲ್​ ತಾಲೂಕಿನ ಸಿದ್ದನಕೊಳ್ಳದ ಮಠದಲ್ಲಿ 'ಭಾವೈಕ್ಯ ಬ್ರಹ್ಮ' ಎಂಬ ಚಿತ್ರದ ಚಿತ್ರೀಕರಣ ನಡೆಯುದ್ದು ಈ ವೇಳೆ ಸ್ಯಾಂಡಲ್​ವುಡ್​ನಲ್ಲಿ ಕೇಳಿಬರುತ್ತಿರುವ ಡ್ರಗ್​ ಮಾಫಿಯಾ ಕುರಿತು ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ಕೇವಲ ಸಿನಿಮಾ ರಂಗದಲ್ಲಿರುವ ನಾಯಕ-ನಾಯಕಿಯರು ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದರೆ ತಪ್ಪಾಗುತ್ತದೆ. ಇವರಷ್ಟೇ ಕಣ್ಣಿಗೆ ಕಾಣುತ್ತಾರೆ ಎಂದು ಹೇಳುವುದು ಅಷ್ಟು ಸರಿಯಲ್ಲ. ಲಕ್ಷಾಂತರ ಜನರಿದ್ದಾರೆ. ಡ್ರಗ್ಸ್ ಸೇವನೆ ಮಾಡುವವರನ್ನು ಎಲ್ಲರನ್ನೂ ‌ಹಿಡಿಯಿರಿ. ಕೇವಲ ಸಿನಿಮಾ ನಟ-ನಟಿಯರಿಗಷ್ಟೇ ಮಾತ್ರ ಏಕೆ ಸೀಮಿತಗೊಳಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಮಾಸ್ಟರ್ ಆನಂದ್

ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಏಕೆಂದರೆ ಎರಡು ದಿನಗಳಿಂದ ನೆಟ್‌ವರ್ಕ್ ಇಲ್ಲದ‌ ಪ್ರದೇಶದಲ್ಲಿ ಚಿತ್ರೀಕರಣದಲ್ಲಿದ್ದೇವೆ. ಯಾರು ಡಗ್ಸ್ ತೆಗೆದುಕೊಳ್ಳುತ್ತಾರೆ ಅವರು ಅವರ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿ ಡಾ.ರಾಜ್​ಕುಮಾರ್​ ಹಾಡಿರುವ ಬಾಳುವಂತ ಹೂವೇ ಬಾಡುವ ಆಸೆ ಏಕೆ ಎಂಬ ಹಾಡನ್ನು ನೆನೆಪಿಕೊಂಡರು. ಭಾವೈಕ್ಯ ಬ್ರಹ್ಮ ಚಿತ್ರಕ್ಕೆ ಮಾಸ್ಟರ್ ಆನಂದ್ ನಾಯಕ ನಟನಾಗಿ ನಟಿಸಿದ್ದಾರೆ.

Last Updated : Sep 1, 2020, 10:34 AM IST

ABOUT THE AUTHOR

...view details