'ಬ್ಲಾಕ್ ಪ್ಯಾಂಥರ್' ಖ್ಯಾತಿಯ ನಟ ಚಡ್ವಿಕ್ ಬೋಸ್ಮ್ಯಾನ್ ಇದೇ ವರ್ಷ ಆಗಸ್ಟ್ನಲ್ಲಿ ನಿಧನರಾಗಿದ್ದು ಅವರ ಸಾವು ಹಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಆದ್ದರಿಂದ 2021 ಮಾರ್ಚ್ನಲ್ಲಿ ಆರಂಭಿಸಲು ನಿರ್ಧರಿಸಿದ್ದ 'ಬ್ಲಾಕ್ ಪ್ಯಾಂಥರ್-2' ಚಿತ್ರೀಕರಣವನ್ನು 2021 ಜುಲೈನಲ್ಲಿ ಆರಂಭಿಸಲು ಮಾರ್ವೆಲ್ ಸ್ಟುಡಿಯೋ ನಿರ್ಧರಿಸಿದೆ.
'ಬ್ಲಾಕ್ ಪ್ಯಾಂಥರ್-2' ಚಿತ್ರೀಕರಣ ದಿನಾಂಕ ಮುಂದೂಡಿದ ಮಾರ್ವೆಲ್ ಸ್ಟುಡಿಯೋ - ಚಡ್ವಿಕ್ ಬೋಸ್ಮ್ಯಾನ್ ನಿಧನ
2021 ಮಾರ್ಚ್ನಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದ 'ಬ್ಲಾಕ್ ಪ್ಯಾಂಥರ್-2' ಚಿತ್ರೀಕರಣದ ದಿನಾಂಕವನ್ನು ಮಾರ್ವೆಲ್ ಸ್ಟುಡಿಯೋ ಮುಂದೂಡಿದೆ. 2021 ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಚಡ್ವಿಕ್ ಬೋಸ್ಮ್ಯಾನ್ ಹಠಾತ್ ನಿಧನದ ನಂತರ ನಿರ್ಮಾಪಕ ರಿಯಾನ್ ಕ್ಲೂಗ್ಲರ್ ಹಾಗೂ ಮಾರ್ವೆಲ್ ಸ್ಟುಡಿಯೋ ಬಹಳ ಶಾಕ್ನಲ್ಲಿದ್ದು ಚಿತ್ರ ನಿರ್ಮಾಣದ ವಿಚಾರವನ್ನು ಬದಿಗೊತ್ತಿತ್ತು. ಆದರೆ ಈಗ ಬೋಸ್ಮ್ಯಾನ್ ನಿಧನದ ದು:ಖದಿಂದ ಎಲ್ಲರೂ ಹೊರ ಬರುತ್ತಿದ್ದು ಸೀಕ್ವೆಲ್ ಮಾಡಲು ಸಿದ್ಧತೆ ಮಾಡುತ್ತಿದೆ. ಇದಕ್ಕೂ ಮುನ್ನ 2021 ಮಾರ್ಚ್ನಲ್ಲಿ ಚಿತ್ರೀಕರಣ ಆರಂಭಿಸಬೇಕು ಎನ್ನಲಾಗಿತ್ತು. ಆದರೆ ಈಗ ಸೀಕ್ವೆಲ್ ಆರಂಭದ ದಿನಾಂಕ ಮುಂದೂಡಲಾಗಿದ್ದು ಜುಲೈನಲ್ಲಿ ಚಿತ್ರೀಕರಣ ಆರಂಭಿಸಲು ನಿರ್ಧರಿಸಿರುವುದಾಗಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿದೆ.
ಮಾರ್ವೆಲ್ ಸ್ಟುಡಿಯೋ ಬ್ಯಾನರ್ನಿಂದ ಪ್ರತಿ ವರ್ಷ ಯಾವುದಾದರೊಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ 2020 ರಲ್ಲಿ ಮಾತ್ರ ಈ ಸಂಸ್ಥೆಯಿಂದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯಕ್ಕೆ 'ಬ್ಲಾಕ್ ಪ್ಯಾಂಥರ್' ಸೀಕ್ವೆಲ್ ತಯಾರಿ ನಡೆದಿದ್ದು ಅಟ್ಲಾಂಟದಲ್ಲಿ ಸುಮಾರು 6 ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. ಆದರೆ ಬೋಸ್ಮ್ಯಾನ್ ಪಾತ್ರಕ್ಕೆ ಬೇರೆ ಯಾವ ನಟನನ್ನು ಕರೆತರಲಾಗುತ್ತಿದೆ ಎಂಬ ವಿಚಾರವನ್ನು ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಮೆಕ್ಸಿಕನ್ ನಟ ಟೆನೋಚ್ ಹುಯೆರ್ಟಾ, ಲೆಟಿಟಿಯಾ ರೈಟ್, ಲುಪಿಟಾ ನ್ಯೊಂಗ್, ವಿನ್ಸ್ಟನ್ ಟ್ಯೂಕ್, ಏಂಜೆಲಾ ಬಾಸ್ಸೆಟ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.