ಕನ್ನಡದ ಹೆಸರಾಂತ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡರ ಮದುವೆಯ ದಿನಾಂಕ ಫಿಕ್ಸ್ ಆಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ 25 ಮತ್ತು 26 ರಂದು ಈ ಮುದ್ದಾದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಚಂದನ್ ಮತ್ತು ನಿವೇದಿತಾ ಗೌಡ ಮದುವೆಗೆ ಈಗಾಗಲೇ ಸಾಕಷ್ಟು ಸಿದ್ಧತೆ ನಡೆಯುತ್ತಿದೆ. ಕಳೆದ ವರುಷ ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಈ ತಿಂಗಳ ಕೊನೆಯಲ್ಲಿ ಸತಿ ಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮದುವೆಯ ನಂತರ ಹನಿಮೂನ್ಗೆ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲು ಪ್ಲಾನ್ ಮಾಡಿದ್ದೇವೆ. ಆದರೆ, ಯಾವುದು ನಿರ್ಧಾರವಾಗಬೇಕಿದೆ. ಯಾಕೆಂದರೆ ಇನ್ನೂ ಕೂಡ ನಮಗೆ ವೀಸಾ ಸಿಕ್ಕಿಲ್ಲ. ಅದು ಸಿಕ್ಕಿದ ಬಳಿಕ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಾವು ನಿರ್ದಿಷ್ಟವಾಗಿ ಯಾವ ಜಾಗಕ್ಕೆ ಹೋಗಬೇಕು ಎಂಬುದನ್ನು ಆಲೋಚಿಸಬೇಕಿದೆ ಎಂದು ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.