ಕರ್ನಾಟಕ

karnataka

ETV Bharat / sitara

ವರ್ಷಾಂತ್ಯದಲ್ಲಿ ಸಿನಿ ಪ್ರಿಯರಿಗೆ ರಸದೌತಣ: ರಿಲೀಸ್​​ಗೆ ರೆಡಿಯಾಗಿವೆ ಸ್ಟಾರ್​​ ನಟರ ಸಿನಿಮಾಗಳು - ಅವನೇ ಶ್ರೀಮನ್ನಾರಾಯಣ ಸಿನಿಮಾ

ಇದೇ ಡಿಸೆಂಬರ್​​ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ರಿಲೀಸ್​ಗೆ ಸಿದ್ದವಾಗಿವೆ. ಸ್ಯಾಂಡಲ್​​​ವುಡ್​​ನಲ್ಲಿ ಸ್ಟಾರ್​​ ನಟರ ಸಿನಿಮಾಗಳು ಜೋರು ಸದ್ದು ಮಾಡುತ್ತಿವೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಾಧಿಕಾ ಕುಮಾರಸ್ವಾಮಿ ಅಭಿನಯದ ಸಿನಿಮಾಗಳು ಇದೇ ಡಿಸೆಂಬರ್​​ನಲ್ಲಿ ತೆರೆಗೆ ಅಪ್ಪಳಿಸಲಿವೆ.

ಈ ವರ್ಷಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ

By

Published : Nov 14, 2019, 11:40 AM IST

ಈ ವರ್ಷಾಂತ್ಯ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ! ಒಂದರ ಹಿಂದೊಂದು ಸಿನಿಮಾಗಳು ಇದೇ ಡಿಸೆಂಬರ್​ನಲ್ಲಿ ಬೆಳ್ಳಿ ತೆರೆ ಮೇಲೆ ಮೂಡಲು ನಾ ಮುಂದು ತಾ ಮುಂದು ಎನ್ನುತ್ತಾ ತುದಿಗಾಲಿನಲ್ಲಿ ನಿಂತ ಹಾಗೆ ಕಾಣಿಸುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗು ರಾಧಿಕಾ ಕುಮಾರಸ್ವಾಮಿ ಅಭಿನಯದ ಸಿನಿಮಾಗಳು ಇದೇ ಡಿಸೆಂಬರ್​​ನಲ್ಲಿ ತೆರೆಗೆ ಅಪ್ಪಳಿಸಲಿವೆ.

ದರ್ಶನ್​​ ಅಭಿನಯದ 'ಒಡೆಯ' ಚಿತ್ರದ ಪೋಸ್ಟರ್‌

ಇದೇ ತಿಂಗಳ ಕೊನೆಯ ವಾರ ಅಂದ್ರೆ ಡಿಸೆಂಬರ್​ 27ಕ್ಕೆ ರಕ್ಷಿತ್​​ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಕೂಡ ತೆರೆಗೆ ಬರುತ್ತಿದೆ. ಇದು ಕೂಡಾ ದೊಡ್ಡ ಬಜೆಟ್​​ನ ಸಿನಿಮಾವಾಗಿದ್ದು, ಮೂರು ಮಂದಿ ನಿರ್ಮಾಪಕರು ಹಣ ಹೂಡಿದ್ದಾರೆ.

'ಅವನೇ ಶ್ರೀಮನ್ನರಾಯಣ'ದಲ್ಲಿ ರಕ್ಷಿತ್​ ಶೆಟ್ಟಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ದಬಾಂಗ್​​-3’ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ. ಈ ಸಿನಿಮಾವನ್ನು ಡಿಸೆಂಬರ್​​ ತಿಂಗಳ 20ಕ್ಕೆ ರಿಲೀಸ್​ ಮಾಡಲು ಚಿತ್ರತಂಡ ಈಗಾಗಲೇ ನಿರ್ಧರಿಸಿದೆ. ಇದು ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಸೋನಾಕ್ಷಿ ಸಿನ್ಹಾ ಚಿತ್ರದ ಕಥಾ ನಾಯಕಿ. ಪ್ರಭುದೇವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸುದೀಪ್​​ ಸಿನಿಮಾದಲ್ಲಿ ವಿಲನ್​ ಆಗಿ ಮಿಂಚಿದ್ದಾರೆ.

ದಬಾಂಗ್​- 3

ಕನ್ನಡದ ಇನ್ನಿತರ ಬಹುನಿರೀಕ್ಷಿತ ಸಿನಿಮಾಗಳಾದ ಏಳು ನಿರ್ದೇಶಕರನ್ನೊಳಗೊಂಡ ರಿಷಬ್ ಶೆಟ್ಟಿ ಕಲ್ಪನೆಯ ‘ಕಥಾ ಸಂಗಮ’, ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವ ನಟನೆಯ ‘ಬ್ರಹ್ಮಚಾರಿ’, ಜಗ್ಗೇಶ್ ಅಭಿನಯದ ‘ತೋತಾಪುರಿ’, ರಾಧಿಕಾ ಕುಮಾರಸ್ವಾಮಿ ಅಭಿನಯದ ‘ದಮಯಂತಿ’, ವಿಕಾಸ್ ಮತ್ತು ಸಿಂಧು ಲೋಕನಾಥ್ ಅಭಿನಯದ ‘ಕಾಣದಂತೆ ಮಾಯವಾದನು’, ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’ ಸೇರಿದಂತೆ ಹಲವಾರು ಸಿನಿಮಾಗಳು ತೆರೆ ಕಾಣಲು​ ಆಗಲು ಸರತಿಯಲ್ಲಿ ನಿಂತಿವೆ.

ದಮಯಂತಿ
ಜಗ್ಗೇಶ್​​
ರಮೇಶ್​ ಅರವಿಂದ್​

ABOUT THE AUTHOR

...view details