ಕ್ರೇಜಿಸ್ಟಾರ್ ರವಿಚಂದ್ರನ್, ತಮ್ಮ ಪುತ್ರ ಮನೋರಂಜನ್ ರವಿಚಂದ್ರನ್ ಅವರ 33ನೇ ಹುಟ್ಟುಹಬ್ಬವನ್ನು ಕನಕಪುರದ ರೆಸಾರ್ಟ್ವೊಂದರಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.
ಇದೇ ಡಿಸೆಂಬರ್ 13 ರಂದು ಮನುರಂಜನ್ ರವಿಚಂದ್ರನ್ ತಮ್ಮ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗನ ಹುಟ್ಟುಹಬ್ಬವನ್ನು ಕನಕಪುರದ ರೆಸಾರ್ಟ್ವೊಂದರಲ್ಲಿ ಕುಟುಂಬ ಸದಸ್ಯರೊಂದಿಗೆ ಆಚರಿಸಿದ ಕ್ರೇಜಿಸ್ಟಾರ್, ಬಳಿಕ ಮಕ್ಕಳು, ಅಳಿಯ ಹಾಗೂ ಸ್ನೇಹಿತರ ಜೊತೆಗೂಡಿ ಕ್ರಿಕೆಟ್ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.