ಕರ್ನಾಟಕ

karnataka

ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ ಮನುರಂಜನ್ ರವಿಚಂದ್ರನ್ - Saheba fame Manuranjan Ravichandran

ಅಭಿನಯ ತರಂಗದಲ್ಲಿ ನಟನಾ ತರಬೇತಿ ಪಡೆದಿರುವ ಮನು ರವಿಚಂದ್ರನ್ ಚಿತ್ರರಂಗಕ್ಕೆ ಬರುವ ಮುನ್ನ ಸಕಲ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಇಂದು ಮನು ರವಿಚಂದ್ರನ್ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಶುಭ ಕೋರಿದ್ದಾರೆ.

Manu Ravichandran Birthday
ರವಿಚಂದ್ರನ್

By

Published : Dec 11, 2020, 10:41 AM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮನು ರವಿಚಂದ್ರನ್​ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಮನು ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ರವಿಚಂದ್ರನ್ ಕುಟುಂಬ

11 ಡಿಸೆಂಬರ್​ 1987 ರಲ್ಲಿ ಬೆಂಗಳೂರಿನಲ್ಲಿ ರವಿಚಂದ್ರನ್ ಹಾಗೂ ಸುಮತಿ ದಂಪತಿ ಮೊದಲ ಪುತ್ರನಾಗಿ ಜನಿಸಿದ ಮನು ಇದೀಗ ಅಪ್ಪನಂತೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ತಾತಾ ವೀರಾಸ್ವಾಮಿ, ಅಪ್ಪ ರವಿಚಂದ್ರನ್ ಅವರಂತ ಕಲಾವಿದರ ನೆರಳಲ್ಲಿ ಬೆಳೆದರೂ ಮನು ಅಭಿನಯ ತರಂಗದಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದು ನಂತರ ಚಿತ್ರರಂಗಕ್ಕೆ ಬಂದಿದ್ದಾರೆ. 2017 ರಲ್ಲಿ ಸಾಹೇಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮನು ನಂತರ ಬೃಹಸ್ಪತಿ ಚಿತ್ರದಲ್ಲಿ ನಟಿಸಿದರು. ಸದ್ಯಕ್ಕೆ ಅವರು ಪ್ರಾರಂಭ, ಮುಗಿಲ್​​ಪೇಟೆ, ರಣಧೀರ:ಪ್ರೇಮಲೋಕದಲ್ಲಿ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನಟನೆ ಹೊರತುಪಡಿಸಿ ಮನು ರವಿಚಂದ್ರನ್ ಕ್ರಿಕೆಟ್ ಆಟಗಾರ ಕೂಡಾ ಹೌದು. ಜಿಲ್ಲಾ ಮಟ್ಟದ ಕ್ರಿಕೆಟ್​ ಟೂರ್ನಿಗಳಲ್ಲಿ ಮನು ಆಟ ಹಾಡಿದ್ದಾರೆ. ಸದ್ಯಕ್ಕೆ ಮನು ಚಿತ್ರಂಗದಲ್ಲಿ ಸಕ್ರಿಯರಾಗಿದ್ದಾರೆ. ಮನು ಕೂಡಾ ಅಪ್ಪನಂತೆ ದೊಡ್ಡ ಹೆಸರು ಮಾಡಲಿ ಎಂದು ಹಾರೈಸೋಣ.

ಕ್ರೇಜಿಸ್ಟಾರ್​​ ಜೊತೆ ಮನು ರವಿಚಂದ್ರನ್

ABOUT THE AUTHOR

...view details