ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಮೊದಲ ಚಿತ್ರ ಸೀತಾಯಣ ಸಿನಿಮಾ ರಿಲೀಸ್ ಆಗದೇ ಇದ್ರೂ, ಕೈ ತುಂಬಾ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಇದೀಗ 'ಓ ಮೈ ಲವ್' ಚಿತ್ರ ಒಪ್ಪಿಕೊಂಡಿದ್ದ ಅಕ್ಷಿತ್ ಶಶಿಕುಮಾರ್, ಈಗ ಚಿತ್ರದ ಫಸ್ಟ್ ಲುಕ್ ಅನಾವರಣ ಆಗಿದೆ.
ಇತ್ತೀಚೆಗೆ ಮಂತ್ರಾಲಯದ ಗುರುಗಳಾದ ಸುಬುಧೇಂದ್ರ ಸ್ವಾಮೀಜಿಗಳು ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ತೂಫಾನ್, ಬಳ್ಳಾರಿ ದರ್ಬಾರ್, 18 ಟು 25 ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್ ಶ್ರೀನು, ಈಗ ಮತ್ತೊಂದು ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ.
'ಓ ಮೈ ಲವ್' ಸಿನಿಮಾದ ಫಸ್ಟ್ಲುಕ್ ಬಿಡುಗಡೆ 'ಓ ಮೈ ಲವ್' ಚಿತ್ರವು ಹದಿಹರೆಯದ ಪ್ರೀತಿ - ಪ್ರೇಮ, ವೈಫೈ ಯುಗದಲ್ಲಿ ಕಣ್ಮರೆಯಾಗುತ್ತಿರುವ ಭಾವನಾತ್ಮಕ ಸಂಬಂಧಗಳ ಕುರಿತಾದ ಚಿತ್ರವಂತೆ. ಅಕ್ಷಿತ್ ಶಶಿಕುಮಾರ್ಗೆ ಜೋಡಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ. ಮಗಧೀರ ವಿಲನ್ ದೇವಗಿಲ್ ಅವರು ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಸಂಕ್ರಾಂತಿ ಹಬ್ಬದ ಶುಭದಿನ ಈ ಚಿತ್ರ ಸೆಟ್ಟೇರಲಿದೆ. ಸಚಿವ ಶ್ರೀರಾಮುಲು, ಉದ್ಯಮಿ ಚನ್ನಬಸಪ್ಪ ಹಾಗೂ ನಟ ಶಶಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿ.ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ.
ಡಾ.ವಿ.ನಾಗೇಂದ್ರಪ್ರಸಾದ್ ಅವರು ಈ ಚಿತ್ರದ 6 ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ 6 ಆ್ಯಕ್ಷನ್ಗಳಿಗೆ ಇಸ್ಮಾರ್ಟ್ ಶಂಕರ್, ಅಲಾ ವೈಕುಂಠಪುರಂಲೋ ಖ್ಯಾತಿಯ ರಿಯಲ್ ಸತೀಶ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೆಸರಾಂತ ಕೊರಿಯೋಗ್ರಾಫರ್ ಮುರಳಿ ಎಲ್ಲ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಆಕಾಶ್ ಕುಮಾರ್ ಚವನ್ ಅವರ ಸಹನಿರ್ದೇಶನ ಈ ಚಿತ್ರಕ್ಕಿದ್ದು, ಬೆಂಗಳೂರು ಸುತ್ತಮುತ್ತ 20 ದಿನಗಳ ಕಾಲ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.