ಕರ್ನಾಟಕ

karnataka

ETV Bharat / sitara

"ಮುಗಿಲ್ ಪೇಟೆ"ಕಡೆ ಮುಖ ಮಾಡಿದ್ರು ಮನೋರಂಜನ್ ರವಿಚಂದ್ರನ್.. - ಖಾಯಾದು

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ "ಮುಗಿಲ್ ಪೇಟೆ "ಕಡೆ ಮುಖ ಮಾಡಿದ್ದಾರೆ. ಹೌದು ಸ್ಯಾಂಂಡಲ್ ವುಡ್‌ನ " ಸಾಹೇಬ" ಈಗಷ್ಟೇ 'ಫ್ರಾರಂಭ' ಚಿತ್ರದ ಕೆಲಸ ಮುಗಿಸಿದ್ದಾರೆ. "ಮುಗಿಲ್ ಪೇಟೆ "ಎಂಬ ಹೊಸಾ ಸಿನಿಮಾಗೆ ರೆಡಿಯಾಗಿದ್ದಾರೆ.

"ಮುಗಿಲ್ ಪೇಟೆ "ಕಡೆ ಮುಖ ಮಾಡಿದ್ರು ಮನೋರಂಜನ್ ರವಿಚಂದ್ರನ್

By

Published : Nov 15, 2019, 10:28 PM IST

Updated : Nov 15, 2019, 11:21 PM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜ್ "ಮುಗಿಲ್ ಪೇಟೆ "ಕಡೆ ಮುಖ ಮಾಡಿದ್ದಾರೆ. ಹೌದು. ಸ್ಯಾಂಡಲ್ ವುಡ್‌ನ "ಸಾಹೇಬ" ಈಗಷ್ಟೇ ಫ್ರಾರಂಭ ಚಿತ್ರದ ಕೆಲಸ ಮುಗಿಸಿದ್ದಾರೆ. ಈಗ "ಮುಗಿಲ್ ಪೇಟೆ " ಎಂಬ ಹೊಸ ಸಿನಿಮಾಗೆ ರೆಡಿಯಾಗಿದ್ದಾರೆ.

"ಮುಗಿಲ್ ಪೇಟೆ "ಕಡೆ ಮುಖ ಮಾಡಿದ್ರು ಮನೋರಂಜನ್ ರವಿಚಂದ್ರನ್

ಇಂದು ಬಸವೇಶ್ವರ ನಗರದ ಡಾ. ಬಿ ಆರ್ ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಮುಹೂರ್ತ ನೇರವೇರಿಸಿದ್ದಾರೆ. ಇನ್ನು, ಈ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿ ಬೋಪಣ್ಣ ಚಿತ್ರದ ಶೂಟಿಂಗ್ ನಿಮಿತ್ತ ಗೈರಾಗಿದ್ರು. ಆದರೆ, ಮಗನ ಹೊಸ ಸಿನಿಮಾ ಮುಹೂರ್ತಕ್ಕೆ ಸುಮತಿ ರವಿಚಂದ್ರನ್ ಆಗಮಿಸಿ ಮನೋರಂಜನ್ ಹೊಸ ಚಿತ್ರಕ್ಕೆ ಹಾರೈಸಿದ್ದಾರೆ.

ಪ್ರೇಮಕಥಾನಕವನ್ನಾಧರಿಸಿರುವ "ಮುಗಿಲ್‌ಪೇಟೆ"

ಸಿನಿಮಾದಲ್ಲಿ ಮನೋರಂಜನ್ ನ್ಯೂ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರೆ. ಹೇರ್ ಸ್ಟೈಲ್‌ನಿಂದ ಬಾಡಿಲಾಂಗ್ವೇಜ್‌ ಹೀಗೆ ಎಲ್ಲದರಲ್ಲಿಯೂ ಅವರು ಡಿಫರೆಂಟ್ ಆಗಿ ಕಾಣಿಸಲು ಭರ್ಜರಿಯಾಗಿ ತಯಾರಿ ಮಾಡ್ಕೊಂದಿದ್ದಾರೆ. ಇನ್ನು, ಕ್ಯೂಟ್ ಲವ್ ಸ್ಟೋರಿ ಇರುವ ಚಿತ್ರವನ್ನು ಭರತ್ ನಾವುಂದ ನಿರ್ದೇಶನ ಮಾಡ್ತಿದ್ದಾರೆ.

ಮುಂಬೈ ಬೆಡಗಿ ಖಾಯಾದು "ಸಾಹೇಬ"ನ ಜೊತೆ ಮುಗಿಲ್ ಪೇಟೆ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇನ್ನೂ ಖಯಾದು ಮೂಲತಃ ಅಸ್ಸಾಂನವರಾಗಿದ್ದು ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿಯಲ್ಲಿ ಒಂದು ಸಿನಿಮಾದಲ್ಲಿ ನಟಿಸಿರುವ ಖಯಾದುಗೆ ಕನ್ನಡದಲ್ಲಿ ಮೊದಲ ಸಿನಿಮಾ ಇದಾಗಿದೆ. ಇನ್ನು, ಈ ಚಿತ್ರವನ್ನು ರವಿಚಂದ್ರನ್ ಪುತ್ರಿ ಅಂಜಲಿ ಗೆಳತಿ ರಕ್ಷಾ ವಿಜಯ್ ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಇರಲಿದೆ. ಚಿತ್ರತಂಡ ಈಗಾಗಲೇ ಶೂಟಿಂಗ್ ಮಾಡಲು ಲೋಕೇಷನ್ ಹಂಟಿಂಗ್ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Last Updated : Nov 15, 2019, 11:21 PM IST

ABOUT THE AUTHOR

...view details