ಮುಂಬೈ : ಸ್ಥಳೀಯರು ಮತ್ತು ವಲಸಿಗರ ನಡುವಿನ ಉದ್ವಿಗ್ನತೆಗೆ ಸಾಕ್ಷಿಯಾಗದ ಯಾವುದೇ ದೇಶವಿಲ್ಲ ಎಂದು ನಟ ಮನೋಜ್ ಬಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ. ಈ ಸಮಸ್ಯೆ ಬಗ್ಗೆ ಅವರ ಮುಂದಿನ ಚಿತ್ರ 'ಭೋನ್ಸ್ಲೆ'ಯಲ್ಲಿ ತಿಳಿಸಲು ಹೊರಟಿದ್ದಾರೆ.
ಸ್ಥಳೀಯ ರಾಜಕಾರಣಿಗಳ ವಿರುದ್ಧ ಹೋರಾಡಲು ವಲಸಿಗರಿಗೆ ಸಹಾಯ ಮಾಡುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಕಥೆಯನ್ನು ಹೇಳುವ ಭೋನ್ಸ್ಲೆಯನ್ನು ದೇವಶಿಶ್ ಮಖಿಜಾ ನಿರ್ದೇಶನ ಮಾಡುತಿದ್ದು, ಬಾಜಪೇಯಿ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವು ಸಾಮಾಜಿಕವಾಗಿ ಚಾಲನೆಯಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಪ್ರಬಲವಾದ ವ್ಯಾಖ್ಯಾನವನ್ನು ನೀಡುತ್ತದೆ. ಧಾರ್ಮಿಕ ವಿಭಜನೆ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮತ್ತು ಮಹಿಳೆಯರ ಮೇಲಿನ ಅಪರಾಧ, ಮಹಿಳೆಯರ ಸುರಕ್ಷತೆ, ಒಂಟಿತನ ಮತ್ತು ವೃದ್ಧರ ನಿವೃತ್ತಿಯ ನಂತರದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತದೆ. ಜೊತೆಗೆ ಸಾರ್ವತ್ರಿಕವಾಗಿ ಚಾಲ್ತಿಯಲ್ಲಿರುವ ವಲಸಿಗರ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ.
ಸ್ಥಳೀಯರು ಮತ್ತು ವಲಸಿಗರ ನಡುವಿನ ಘರ್ಷಣೆ, ಇಬ್ಬರ ನಡುವಿನ ಸಂಪೂರ್ಣ ಅಪನಂಬಿಕೆ ಸೇರಿದಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂದು ಬಾಜಪೇಯಿ ತಿಳಿಸಿದ್ದಾರೆ.