ಕರ್ನಾಟಕ

karnataka

ETV Bharat / sitara

ಚಿಕ್ಕಣ್ಣ ನಾಯಕನಾಗಿರುವ ಈ ಸಿನಿಮಾದಲ್ಲಿ ನಗುವಿಗೆ ಮೋಸವೇ ಇಲ್ವಂತೆ! - ಶ್ರೀ ಭರತ ಬಾಹುಬಲಿ

ನಿರ್ದೇಶಕ ಮಂಜು ಮಾಂಡವ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಶ್ರೀ ಭರತ ಬಾಹುಬಲಿ. ಈ ಸಿನಿಮಾದಲ್ಲಿ ಕಾಮಿಡಿ ಚಿಕ್ಕಣ್ಣ ನಾಯಕನಾಗಿ ನಗಿಸೋಕೆ ರೆಡಿಯಾಗಿದ್ದಾರೆ,

Manju mandavya Direction kannada movie bharata bahubali
ಚಿಕ್ಕಣ್ಣ

By

Published : Jan 5, 2020, 12:42 PM IST

ಮಾಸ್ಟರ್​​ಪೀಸ್ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಮೂರನೇ ಚಿತ್ರಕ್ಕೆ ಕಾಮಿಡಿ ಡಾನ್ ಚಿಕ್ಕಣ್ಣನೇ ನಾಯಕ. ಹೌದು ನಿರ್ದೇಶಕ ಮಂಜು ಮಾಂಡವ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಶ್ರೀ ಭರತ ಬಾಹುಬಲಿ. ಈ ಸಿನಿಮಾದಲ್ಲಿ ಕಾಮಿಡಿ ಚಿಕ್ಕಣ್ಣ ನಾಯಕನಾಗಿ ನಗಿಸೋಕೆ ರೆಡಿಯಾಗಿದ್ದಾರೆ,

ಇನ್ನು ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಿದ್ದು, ಚಿತ್ರ ತಂಡ ಸದ್ಯ ಪ್ರೀ ಪ್ರೊಡಕ್ಷನ್​​ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಕೆಲಸಗಳು ಮುಗಿದ ಮೇಲೆ ಅಂದ್ರೆ ಇನ್ನೆರಡು ತಿಂಗಳಲ್ಲಿ ಶ್ರೀ ಭರತ ಬಾಹುಬಲಿ ಚಿತ್ರ ಸೆಟ್ಟೇರಲಿದೆ ಎಂದು ಚಿಕ್ಕಣ್ಣ ತಿಳಿಸಿದರು.

ಚಿಕ್ಕಣ್ಣ ನಾಯಕನಾಗಿರುವ ಈ ಸಿನಿಮಾದಲ್ಲಿ ನಗುವಿಗೆ ಮೋಸವೇ ಇಲ್ವಂತೆ!

ಈ ಚಿತ್ರದಲ್ಲಿ ನಾನು ನಾಯಕ ಅನ್ನುವುದಕ್ಕಿಂತ ಮುಖ್ಯವಾಗಿ ಒಂದು ಒಳ್ಳೆ ಪಾತ್ರ ಮಾಡುತ್ತಿದ್ದೇನೆ. ಆ ಚಿತ್ರದಲ್ಲಿ ಕಥೆಯೇ ಹೀರೋ. ನಿರ್ದೇಶಕ ನಿರ್ಮಾಪಕರೇ ಹೀರೋ. ಇಷ್ಟು ದಿನ ಫ್ರೆಂಡ್ ಕ್ಯಾರೆಕ್ಟರ್​​ಗಳಲ್ಲಿ ಪ್ರೇಕ್ಷಕರನ್ನು ನಗಿಸುತ್ತಿದ್ದೆ‌. ಆದರೆ ಈ ಹೊಸ ಚಿತ್ರದಲ್ಲಿ ಅದಕ್ಕಿಂತ ಹೆಚ್ಚು ನಗಿಸುತ್ತೇನೆ ಎಂದು ಹೇಳುವ ಮೂಲಕ ಮಾಂಡವ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಶ್ರೀ ಭರತ ಬಾಹುಬಲಿ ಚಿತ್ರ ಪಕ್ಕಾ ಕಾಮಿಡಿ ಚಿತ್ರ ಎಂದು ಚಿಕ್ಕಣ್ಣ ತಿಳಿಸಿದ್ರು.

ABOUT THE AUTHOR

...view details