ಕನ್ನಡ ಚಿತ್ರರಂಗದಲ್ಲಿ ಸಂಭಾಷಣೆಗಾರನಾಗಿ ಪ್ರಸಿದ್ಧಿ ಪಡದ ಮಂಜು ನಿರ್ದೇಶಕರಾಗಿಯೂ ಮಿಂಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ನಿರ್ದೇಶನ ಮಾಡಿ ಸಿನಿಮಾ ಭರ್ಜರಿ ಗಳಿಕೆ ಕಂಡಿತ್ತು. ಮಂಜು ಇದೀಗ ಸೂಪರ್ ಸ್ಟಾರ್ ಉಪೇಂದ್ರ ಅವರ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರಂತೆ.
'ಟೋಪಿವಾಲ'ನಿಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ 'ಮಾಸ್ಟರ್ ಪೀಸ್' ಡೈರೆಕ್ಟರ್! - ಸೂಪರ್ ಸ್ಟಾರ್ ಉಪೇಂದ್ರ
ಮಂಜು ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ಭರ್ಜರಿ ಗಳಿಕೆ ಕಂಡಿತ್ತು. ಇದೀಗ ಮಂಜು, ಸೂಪರ್ ಸ್ಟಾರ್ ಉಪೇಂದ್ರ ಅವರ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರಂತೆ. ಆದ್ರೆ ಈ ಸಿನಿಮಾ ಪ್ರಾರಂಭವಾಗುವುದು ಮುಂದಿನ ವರ್ಷವಂತೆ.
ಮಂಜು ಮಾಂಡವ್ಯ ನಿರ್ದೇಶನಕ್ಕೆ ಹಣ ಹೂಡುತ್ತಾ ಇರುವವರು ನಿರ್ಮಾಪಕ ಚಂದ್ರಶೇಖರ್. ಅಣ್ಣಯ್ಯ ಚಂದ್ರು ಅಂತಲೇ ಇವರು ಫೇಮಸ್. ಎಂ.ಚಂದ್ರಶೇಖರ್ ಅವರು ಸಹ ನಾಲ್ಕು ವರ್ಷಗಳ ಬಳಿಕ ನಿರ್ಮಾಣಕ್ಕೆ ವಾಪಸ್ಸಾಗುತ್ತಿದ್ದಾರೆ. 2015ರಲ್ಲಿ ಕಿಚ್ಚ ಸುದೀಪ್ ಅಭಿನಯದ ‘ರನ್ನ’ ಸಿನಿಮಾ ನಿರ್ಮಾಣ ಮಾಡಿದ್ದರು. ಚಂದ್ರು ಅವರ ನಿಮಿಷಾಂಬ ಪ್ರೊಡಕ್ಷನ್ ಸಂಸ್ಥೆ ಈ ಹಿಂದೆ ಅಣ್ಣಯ್ಯ, ಬಿಂದಾಸ್, ದೊರೆಯಂತಹ ದೊಡ್ಡ ಸಿನಿಮಾಗಳ ನಿರ್ಮಾಣ ಮಾಡಿದೆ.
ಸೂಪರ್ ಸ್ಟಾರ್ ಉಪೇಂದ್ರ ಈಗ ‘ಕಬ್ಜ’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ಮಂಜು ಮಾಂಡವ್ಯ ಸಿನಿಮಾಕ್ಕೆ ಬಂದು ಸೇರಿಕೊಳ್ಳುವುದು ಮುಂದಿನ ವರ್ಷ ಸಂಕ್ರಾಂತಿ ಸಮಯಕ್ಕೆ. ಅಷ್ಟು ಹೊತ್ತಿಗೆ ಕಥೆ, ಚಿತ್ರಕಥೆ, ತಾಂತ್ರಿಕ ವರ್ಗವನ್ನು ಮಂಜು ಸಿದ್ದಮಾಡಿಕೊಳ್ಳಲ್ಲಿದ್ದಾಋಮಥೇ.