ಚೆನ್ನೈ: ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ತಮಿಳು ಭಾಷೆಯ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್ ಸೆಲ್ವನ್'-1 2022ರಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ತಿಳಿಸಿದ್ದಾರೆ. ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಂ ರವಿ ಮತ್ತು ಐಶ್ವರ್ಯಾ ಲಕ್ಷ್ಮಿ ಮುಂತಾದ ನಟರ ಸಮೂಹವೇ ಈ ಚಿತ್ರದಲ್ಲಿದೆ.
2022ರಲ್ಲಿ ತೆರೆಗೆ ಬರಲಿದೆ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಭಾಗ-1 - ಆಲಿರಾಜಾ ಸುಬಾಸ್ಕರನ್
ನಿರ್ಮಾಪಕ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್'-1 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರೊಡಕ್ಷನ್ ಹೌಸ್‌ಗಳ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗಳು ತಿಳಿಸಿದೆ.
ಮಣಿರತ್ನಂ
ಪೊನ್ನಿಯಿನ್ ಸೆಲ್ವನ್ ಚಿತ್ರವು ಕಲ್ಕಿ ಕೃಷ್ಣಮೂರ್ತಿಯವರ 1955ರ ಕಾದಂಬರಿ ಆಧಾರಿತವಾಗಿದೆ. ಈ ಪುಸ್ತಕವು ದಕ್ಷಿಣದ ಅತ್ಯಂತ ಶಕ್ತಿಶಾಲಿ ರಾಜರಲ್ಲಿ ಒಬ್ಬನಾದ ಅರುಲ್ಮೋಳಿವರ್ಮನ ಆರಂಭಿಕ ದಿನಗಳ ಕಥೆಯನ್ನು ವಿವರಿಸುತ್ತದೆ.
ಪೊನ್ನಿಯಿನ್ ಸೆಲ್ವನ್, ರತ್ನಂ ಅವರ ಪ್ರೊಡಕ್ಷನ್ ಹೌಸ್ ಮದ್ರಾಸ್ ಟಾಕೀಸ್ ಮತ್ತು ಆಲಿರಾಜಾ ಸುಬಾಸ್ಕರನ್ ಅವರ ಬ್ಯಾನರ್ ಲೈಕಾ ಪ್ರೊಡಕ್ಷನ್ಸ್ ಮೂಲಕ ತೆರೆಗೆ ಬರಲಿದೆ. ಪ್ರೊಡಕ್ಷನ್ ಹೌಸ್‌ಗಳ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗಳು ಚಿತ್ರದ ಇತ್ತೀಚಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.