ಕರ್ನಾಟಕ

karnataka

ETV Bharat / sitara

'ಏಕ್​ ಲವ್​​ ಯಾ' ಅಂತ ಪಡ್ಡೆ ಹೈಕ್ಳಿಗೆ ಲವ್​​​​ ಕಿಕ್​​ ನೀಡಲು ಕರುನಾಡಿಗೆ ಬಂದ 'ಮಂಗ್ಲಿ'.. - ಅರ್ಜುನ್ ಜನ್ಯ

ಕನ್ನಡ ಚಿತ್ರರಂಗಕ್ಕೆ 'ಕಣ್ಣೆ ಅದಿರಿಂಧಿ' ಅಂತ ಎಂಟ್ರಿ ಕೊಟ್ಟ ಟಾಲಿವುಡ್​ ಗಾಯಕಿ ಸತ್ಯವತಿ ಮಂಗ್ಲಿ ಸದ್ಯ ಸ್ಯಾಂಡಲ್​ವುಡ್​​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. 'ರಾಬರ್ಟ್​​' ಚಿತ್ರದ ನಂತರ ಹಲವಾರು ಸಿನಿಮಾಗಳಿಗೆ ಧ್ವನಿ ನೀಡಿರುವ ಮಂಗ್ಲಿ ಸದ್ಯ ಪ್ರೇಮ್​ ನಿರ್ದೇಶನದ, ಅರ್ಜುನ್​ ಜನ್ಯ ಸಂಗೀತದ 'ಏಕ್​​ ಲವ್​ ಯಾ' ಸಿನಿಮಾದ ಹಾಡೊಂದನ್ನ ಹಾಡಿದ್ದಾರೆ.

mangli-singing-a-song-in-prem-ek-love-ya
ಮಂಗ್ಲಿ

By

Published : Jul 29, 2021, 6:06 PM IST

ಸಿನಿಮಾ‌ ಲೋಕದಲ್ಲಿ, ಯಾರು ಯಾವಾಗ ಸ್ಟಾರ್ ಆಗ್ತಾರೆ ಅಂತಾ ಹೇಳೋದಿಕ್ಕೆ ಬರೋದಿಲ್ಲ. ಅದೇ ತರಹ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ, ಜಾನಪದ ಹಾಡು ಮತ್ತು ನಿರೂಪಣೆ ಮೂಲಕ ಹೆಸರುವಾಸಿಯಾಗಿರುವ ಸತ್ಯವತಿ ಮಂಗ್ಲಿ ಈಗ ಸ್ಟಾರ್ ಸಿಂಗರ್ ಪಟ್ಟ ಅಲಂಕರಿಸಿರೋದು ಗೊತ್ತಿರುವ ವಿಚಾರ. 'ರಾಬರ್ಟ್' ಸಿನಿಮಾದ ಒಂದೇ ಒಂದು ಹಾಡು ಮಂಗ್ಲಿಯನ್ನ ಸ್ಯಾಂಡಲ್​ವುಡ್​ಗೆ​​ ಪರಿಚಯ ಮಾಡಿಸಿಕೊಟ್ಟಿತ್ತು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಗಾಯಕಿ ಸತ್ಯವತಿ ಮಂಗ್ಲಿ

'ರಾಬರ್ಟ್' ಚಿತ್ರದ ತೆಲುಗು ವರ್ಷನ್ 'ಕಣ್ಣೆ ಅದಿರಿಂಧಿ' ಹಾಡು ಸೂಪರ್ ಹಿಟ್ ಆಗುತ್ತಿದ್ದಂತೆ ಕನ್ನಡ ಸಿನಿಮಾ ರಂಗದಲ್ಲಿ ಮಂಗ್ಲಿಗೆ ಪುಲ್​​ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅಲ್ಲದೆ ಕರ್ನಾಟಕದಲ್ಲಿ ಮಂಗ್ಲಿ ಮೇನಿಯಾ ಪ್ರಾರಂಭವಾಗಿದ್ದು, ಸತ್ಯವತಿ ಸಾಂಗ್​ ಅಂದ್ರೆ ಸಾಕು, ಫ್ಯಾನ್ಸ್​​​​​ ಸ್ಟೆಪ್​ ಹಾಕೋಕೆ ರೆಡಿಯಾಗ್ತಾರೆ. 'ರಾಬರ್ಟ್' ನಂತರ 'ಕರಿಯಾ ಐ ಲವ್ ಯೂ' ಅನ್ನೋ ಸಿನಿಮಾದಲ್ಲಿ ಮಂಗ್ಲಿ ಹಾಡಿದ್ದಾರೆ. ಅಷ್ಟೇ ಅಲ್ಲಾ, ಶಿವಣ್ಣ 124ನೇ ಸಿನಿಮಾದಲ್ಲೂ ಮಂಗ್ಲಿ ಪಾತ್ರವೊಂದನ್ನ ಮಾಡ್ತಿದ್ದಾರೆ.

'ಏಕ್​ ಲವ್​​ ಯಾ' ಅಂತ ಪಡ್ಡೆ ಹೈಕ್ಳಿಗೆ ಲವ್​​​​ ಕಿಕ್​​ ನೀಡಲು ಕರುನಾಡಿಗೆ ಬಂದ 'ಮಂಗ್ಲಿ'

ಇದೀಗ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದಲ್ಲಿ ಹಾಡೊಂದನ್ನ ಹಾಡಿದ್ದಾರೆ. ಬುಧವಾರವಷ್ಟೇ ಬೆಂಗಳೂರಿನ ಹೆಬ್ಬಾಳದಲ್ಲಿ ಅರ್ಜುನ್ ಜನ್ಯ, ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸತ್ಯವತಿ ಮಂಗ್ಲಿ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್​ ಇಟ್ಟೆ ಹೇಳೋ ಭಗವಂತ' ಎಂಬ ಎಣ್ಣೆ ಹಾಡಿಗೆ ಧ್ವನಿ ನೀಡಿದ್ದು, ಈ ಕುರಿತು ವಿಡಿಯೋ ಒಂದನ್ನ ನಿರ್ದೇಶಕ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಗಾಯಕಿ ಸತ್ಯವತಿ ಮಂಗ್ಲಿ

ABOUT THE AUTHOR

...view details