ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಹೊಸಬರ ಚಿತ್ರಗಳೇ ಹೆಚ್ಚು ತಯಾರಾಗುತ್ತಿವೆ. ಇನ್ನು ಇದುವರೆಗೂ ತುಳು ಚಿತ್ರಗಳನ್ನು ತಯಾರಿಸುತ್ತಿದ್ದವರು ಕನ್ನಡ ಚಿತ್ರಗಳನ್ನೂ ಮಾಡಲು ಆರಂಭಿಸಿದ್ದಾರೆ. ಚಿತ್ರರಸಿಕರು ಕೂಡಾ ಹೊಸಬರ ಚಿತ್ರಗಳನ್ನು ಸಂತೋಷದಿಂದಲೇ ಸ್ವೀಕರಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ 'ಲುಂಗಿ' ಉದ್ಯಮ ಆರಂಭಿಸಲು ಬರುತ್ತಿದ್ದಾರೆ ಮಂಗಳೂರು ಪ್ರತಿಭೆಗಳು - ಅಹಲ್ಯಾ ಸುರೇಶ್
ಮಂಗಳೂರಿನ ಪ್ರತಿಭೆಗಳು ಸೇರಿ ನಿರ್ಮಿಸಿ, ನಿರ್ದೇಶಿಸಿರುವ 'ಲುಂಗಿ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಈ ಚಿತ್ರ ಗೆಲ್ಲುವ ಭರವಸೆ ಮೂಡಿಸಿದೆ. ಮುಖೇಶ್ ಹೆಗ್ಡೆ ನಿರ್ಮಾಣದ ಸಿನಿಮಾವನ್ನು ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದಾರೆ.
![ಸ್ಯಾಂಡಲ್ವುಡ್ನಲ್ಲಿ 'ಲುಂಗಿ' ಉದ್ಯಮ ಆರಂಭಿಸಲು ಬರುತ್ತಿದ್ದಾರೆ ಮಂಗಳೂರು ಪ್ರತಿಭೆಗಳು](https://etvbharatimages.akamaized.net/etvbharat/prod-images/768-512-4325075-thumbnail-3x2-lungi.jpg)
'ಚಾಲಿ ಪೋಲಿಲು' ತುಳುಚಿತ್ರದ ನಂತರ ವೀರೇಂದ್ರ ಶೆಟ್ಟಿ ಇದೀಗ 'ಸವರ್ಣದೀರ್ಘ ಸಂಧಿ' ಸಿನಿಮಾವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ಇದೀಗ ಖರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಹೆಗ್ಡೆ 'ಲುಂಗಿ' ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಅರ್ಜುನ್ ಲೂಯಿಸ್ ಹಾಗೂ ಅಕ್ಷಿತ್ ಶೆಟ್ಟಿ ಚಿತ್ರದ ಕಥೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಇನ್ನು ಪ್ರಣವ್ ಹೆಗ್ಡೆ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಇವರೊಂದಿಗೆ ಅಹಲ್ಯಾ ಸುರೇಶ್ ಹಾಗೂ ರಾಧಿಕಾ ರಾವ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ, ನಿರ್ಮಾಪಕ, ನಟರೆಲ್ಲಾ ಬಹುತೇಕ ಮಂಗಳೂರು ರಂಗಭೂಮಿ ಕಲಾವಿದರು ಎನ್ನುವುದು ವಿಶೇಷ.
ನಟ ರಕ್ಷಿತ್ ಶೆಟ್ಟಿ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 'ಕರ್ನಾಟಕದಲ್ಲಿ ಎಷ್ಟೋ ಉಪಭಾಷೆಗಳಿವೆ. ರಾಜ್ಯದ ಎಲ್ಲಾ ಭಾಗದ ಪ್ರತಿಭೆಗಳು ತಮ್ಮ ತಮ್ಮ ಭಾಷೆಗಳಲ್ಲಿ ಸಿನಿಮಾ ಮಾಡಲು ಮುಂದೆ ಬರಬೇಕು' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಹೊಸ ಬ್ಯುಸ್ನೆಸ್ ಆರಂಭಿಸುವ ಉತ್ಸಾಹದಲ್ಲಿರುವ ನಾಯಕ ಸಾಲಕ್ಕಾಗಿ ಪರದಾಡುವ ರೀತಿ, ಪ್ರೀತಿ-ಪ್ರೇಮ, ಹತಾಶೆ, ಲುಂಗಿ ಬ್ಯುಸ್ನೆಸ್ ಆರಂಭ ಎಲ್ಲವನ್ನೂ ಟ್ರೇಲರ್ನಲ್ಲಿ ನೋಡಬಹುದು. ಈ ಟ್ರೇಲರ್ ಕುತೂಹಲ ಹುಟ್ಟಿಸಿದ್ದು ಚಿತ್ರ ಗೆಲ್ಲುವ ಭರವಸೆ ಹುಟ್ಟಿಸಿದೆ. 'ಪ್ರೀತಿ ಸಂಸ್ಕೃತಿ ಸೌಂದರ್ಯ' ಎಂಬ ಟ್ಯಾಗ್ಲೈನ್ ಹೊಂದಿರುವ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.