ಪರಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿರುವ ಕನ್ನಡ ನಟಿಯರಲ್ಲಿ ಸಂಚಿತ ಶೆಟ್ಟಿ ಕೂಡಾ ಒಬ್ಬರು. 2006 ರಲ್ಲಿ ಬಿಡುಡೆಯಾದ 'ಮುಂಗಾರು ಮಳೆ' ಚಿತ್ರದಲ್ಲಿ ಪೂಜಾಗಾಂಧಿ ಸ್ನೇಹಿತೆ ಆಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಚಿತ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
ಮಂಗಳೂರು ಹುಡುಗಿ ಸಂಚಿತ ಶೆಟ್ಟಿ ಮಿಲನ, ಭಯ.ಕಾಂ ಸಿನಿಮಾಗಳಲ್ಲಿ ನಟಿಸಿದ ನಂತರ ತಮಿಳು ಚಿತ್ರರಂಗ ಇವರನ್ನು ಕೈ ಬೀಸಿ ಕರೆಯಿತು. ಅಲ್ಲಿಂದ ತೆಲುಗು ಚಿತ್ರರಂಗದಲ್ಲಿ ಕೂಡಾ ಸಂಚಿತ ಶೆಟ್ಟಿ ತಮ್ಮ ಪ್ರತಿಭೆ ತೋರಿದರು. 2017 ರಲ್ಲಿ ಧನಂಜಯ್ ಅಭಿನಯದ 'ಬದ್ಮಾಶ್'ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ವಾಪಸಾದರು. ಆದರೆ ಆ ಚಿತ್ರ ಗೆಲ್ಲದ ಕಾರಣ ಸಂಚಿತ ಮತ್ತೆ ಪರಭಾಷೆಯತ್ತ ಮುಖ ಮಾಡಿದರು.
'ಮುಂಗಾರು ಮಳೆ' ಮೂಲಕ ಕರಿಯರ್ ಆರಂಭಿಸಿದ ಸಂಚಿತ ಸದ್ಯಕ್ಕೆ ಸಂಚಿತ ಕೈಯ್ಯಲ್ಲಿ ಮೂರು ತಮಿಳು ಸಿನಿಮಾಗಳಿವೆ. ವಿಜಯ್ ಸೇತುಪತಿ ಜೊತೆ ಸಂಚಿತ ನಟಿಸಿದ 'ಸೂದು ಕಾವುಮ್' ಸಂಚಿತ ಶೆಟ್ಟಿ ಅವರಿಗೆ ಹೆಚ್ಚು ಹೆಸರು ತಂದಿತು. ಈ ಸಿನಿಮಾ ಬಿಡುಗಡೆ ವೇಳೆ ಕನ್ನಡ ಪತ್ರಕರ್ತರು ಈ ಚಿತ್ರ ನೋಡುವಂತೆ ಸಂಚಿತ ವ್ಯವಸ್ಥೆ ಕೂಡಾ ಮಾಡಿದ್ದರು.
'ಬದ್ಮಾಶ್' ಚಿತ್ರದಲ್ಲಿ ಧನಂಜಯ್, ಸಂಚಿತ ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಂಚಿತ ವಿವಿಧ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ಅಭಿಮಾನಿಗಳು ಸಂಚಿತ ಫೋಟೋಗಳನ್ನು ಬಹಳ ಇಷ್ಟಪಟ್ಟಿದ್ದಾರೆ. ತಮಿಳಿನ 'ಪಾರ್ಟಿ', 'ದೇವಸಾಸ್ ಬ್ರದರ್ಸ್' ಹಾಗೂ ಮತ್ತೊಂದು ಹೆಸರಿಡದ ಚಿತ್ರಗಳಲ್ಲಿ ಸಂಚಿತ ಬ್ಯುಸಿಯಾಗಿದ್ದಾರೆ.
ಸಂಚಿತ ಲಾಕ್ಡೌನ್ ಫೋಟೋಶೂಟ್