ಕರ್ನಾಟಕ

karnataka

ETV Bharat / sitara

'ಮಂಗಳವಾರ ರಜಾದಿನ'ದ ಮೊದಲ ಹಾಡು ಶುಕ್ರುವಾರ ರಿಲೀಸ್

ಕನ್ನಡದಲ್ಲಿ 'ಮಂಗಳವಾರ ರಜಾದಿನ' ಎಂಬ ಸಿನಿಮಾ ಮಾಡಲಾಗಿದ್ದು, ಇದೇ ಶುಕ್ರವಾರ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಜನರಲ್ಲಿ ಕುತೂಹಲ ಹುಟ್ಟಿಸಿತ್ತು. ಶುಕ್ರವಾರ ಬಿಡುಗಡೆಯಾಗಲಿರುವ ಹಾಡು ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಲಿದೆ.

ಚಂದನ್​ ಆಚಾರ್​​​

By

Published : Nov 4, 2019, 10:41 AM IST

ಇತ್ತೀಚೆಗಂತೂ ಸಿನಿಮಾ ಹೆಸರುಗಳು ವಿಚಿತ್ರವಾಗಿ ಮೂಡಿ ಬರುತ್ತಿವೆ. ಈ ಹಿಂದೆ ಹಲವಾರು ಟ್ರೆಂಡ್​ಗಳು ಬಂದು ಹೋಗಿವೆ. ಹಳೆಯ ಖ್ಯಾತ ನಟರ ಹೆಸರುಗಳ್ನು ಇಟ್ಟು ಸಿನಿಮಾ ಮಾಡುವುದು. ಯಾವುದಾದರು ಹಿಟ್​​ ಸಿನಿಮಾಗಳ ಹಾಡಿನ ಒಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡುದುವು ಈ ಹಿಂದೆ ಆಗಿ ಹೋಗಿದೆ. ಇದೀಗ ಇನ್ನೊಂದು ಟ್ರೆಂಡ್​​ ಶುರುವಾಗಿದ್ದು, ವಾರಗಳ ಹೆಸರೇ ಸಿನಿಮಾ ಹೆಸರುಗಳಾಗಿವೆ.

ಯುವಿನ್​​​

ಹೌದು, ಕನ್ನಡದಲ್ಲಿ 'ಮಂಗಳವಾರ ರಜಾದಿನ' ಎಂಬ ಸಿನಿಮಾ ಮಾಡಲಾಗಿದ್ದು, ಇದೇ ಶುಕ್ರವಾರ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಜನರಲ್ಲಿ ಕುತೂಹಲ ಹುಟ್ಟಿಸಿತ್ತು. ಶುಕ್ರವಾರ ಬಿಡುಗಡೆಯಾಗಲಿರುವ ಹಾಡು ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಲಿದೆ.

ಈ ಸಿನಿಮಾಗೆ ಯುವಿನ್​​​​ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ತ್ರಿವರ್ಗ ಹಾಗೂ ಲೋಟಾಸ್ ಲೈಟ್ಸ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಅಲ್ಲದೆ ಇದೇ ನವೆಂಬರ್ 8ರಂದು ಮೊದಲ ಹಾಡನ್ನು ಲಹರಿ ಮ್ಯೂಜಿಕ್ ಮೂಲಕ ಅನಾವರಣ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಚಂದನ್ ಆಚಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸದ್ಯ ಇವರು ಬಿಗ್ ಬಾಸ್ ಮನೆಯಲ್ಲಿ ಇರೋದ್ರಿಂದ ಕಥಾ ನಾಯಕನ ಅನುಪಸ್ಥಿತಿಯಲ್ಲಿ ಚಿತ್ರದ ಮೊದಲ ಹಾಡು ಬರುತ್ತಿದೆ.

ಲಾಸ್ಯ

ಮಂಗಳವಾರ ರಜಾದಿನ ಸಿನಿಮಾದ ಮೊದಲ ಹಾಡಿನಲ್ಲಿ ಲಾಸ್ಯ ನಾಗರಾಜ್, ರಜನಿಕಾಂತ್, ನಂದನ್ ರಾಜ್ ಸಹ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಯುವಿನ್ ರಚಿಸಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಗೂ ನವಿನ್ ಸಜ್ಜು ಧ್ವನಿ ನೀಡಿದ್ದಾರೆ.

ಚಂದನ್​ ಆಚಾರ್​​​

ಇನ್ನು ಈ ಚಿತ್ರದಲ್ಲಿ ಕ್ಷೌರಿಕನ ಕಥೆಯನ್ನು ಹೇಳಲಾಗಿದೆ. ಅಲ್ಲದೆ ಹಾಸ್ಯ ಮತ್ತು ಕೌಟುಂಬಿಕ ವಿಚಾರ ಸಹ ಇದರಲ್ಲಿ ಇದೆ. ಲಾಸ್ಯ ನಾಗರಾಜ್, ಜಹಾಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶ್ಪಾಂಡೆ, ನಂದನ್ ರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ. ವಿ.ನಾಗೇಂದ್ರ ಪ್ರಸಾದ್, ಯುವಿನ್ ಲಿರಿಕ್​​​ ಬರೆದಿದ್ದಾರೆ.

ABOUT THE AUTHOR

...view details