ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಮಂಡ್ಯ ಸಂಸದೆ..! - ಅಭಿಷೇಕ್ ಅಂಬರೀಶ್
ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿ ಮಾಡಿದರು. ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದರು.
ಮಂಡ್ಯ ಸಂಸದೆ
ಸಂಸದೆ ಸುಮಲತಾಗೆ ಪುತ್ರ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದಾರೆ. ಸುಮಲತಾ ಹಾಗೂ ಗಡ್ಕರಿ ಅವರ ಈ ಭೇಟಿ ಸೌಜನ್ಯಯುತವಾಗಿದ್ದು, ಕೇಂದ್ರ ಸರ್ಕಾರದ ಜೊತೆ ಬಾಂಧವ್ಯದ ದೃಷ್ಟಿಯಿಂದ ಸುಮಲತಾ ಇಂದು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚಿಗಷ್ಟೆ ಸುಮಲತಾ ಕಳೆದ ನವಂಬರ್ನಲ್ಲಿ ಮಂಡ್ಯದಲ್ಲಿ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ತರುವಲ್ಲಿ ಯಶಸ್ವಿಯಾಗಿದ್ದರು. ಮಂಡ್ಯದ ನೂತನ ಸಂಸದೆ ಸುಮಲತಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಭೇಟಿ ತುಂಬಾ ಮಹತ್ವ ಪಡೆದಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.