ರೋಬೋ ಗಣೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಎವಿಡೆನ್ಸ್' ಸಿನಿಮಾ ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡು ಸೆಟ್ಟೇರಿದೆ. ಚಿತ್ರಕ್ಕೆ ಇದೀಗ ನಾಯಕಿ ಆಯ್ಕೆಯಾಗಿದ್ದು ಮಾನಸ ಜೋಷಿ, ಗಣೇಶ್ ಜೊತೆ ನಟಿಸಲಿದ್ದಾರೆ. ಮಾನಸ, ದೂರದರ್ಶನ ಮಾಜಿ ನಿರ್ದೇಶಕ ಮಹೇಶ್ ಜೋಷಿ ಅವರ ಪುತ್ರಿ ಎಂಬುದು ವಿಶೇಷ.
ರೋಬೋ ಗಣೇಶ್ಗೆ 'ಎವಿಡೆನ್ಸ್'ನಲ್ಲಿ ಜೊತೆಯಾದ ಮಾನಸ ಜೋಷಿ - Praveen Ramakrishna direction Robo
ಪ್ರವೀಣ್ ರಾಮಕೃಷ್ಣ ನಿರ್ದೇಶನದಲ್ಲಿ ರೋಬೋ ಗಣೇಶ್ ನಟಿಸುತ್ತಿರುವ 'ಎವಿಡೆನ್ಸ್' ಚಿತ್ರಕ್ಕೆ ಮಾನಸ ಜೋಷಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀ ಧೃತಿ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಮಾನಸಿ ಜೋಷಿ ಈಗಾಗಲೇ ಲಾಸ್ಟ್ ಬಸ್, ಯಶೋಗಾಥೆ, ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ನಟಿಸಿದ್ದಾರೆ. ರೋಬೋ ಗಣೇಶ್ ದಕ್ಷಿಣ ಭಾರತದ ರಿಯಾಲಿಟಿ ಶೋಗಳ ಮೂಲಕ ಹೆಸರಾದವರು. ಇದುವರೆಗೂ ಅನೇಕ ಕಾರ್ಯಕ್ರಮಗಳನ್ನು ಗಣೇಶ್ ನೀಡಿದ್ದಾರೆ. ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಾ ವಿಶೇಷ ಸಂಯೋಜನೆ ಹಾಗೂ ವಿಭಿನ್ನ ಕಥಾವಸ್ತುವುಳ್ಳ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಗಣೇಶ್ಗೆ ಸುಮಾರು 10 ನೃತ್ಯ ಪ್ರಾಕಾರಗಳು ಗೊತ್ತು. ಅದೇ ರೀತಿ ಈ ಚಿತ್ರದಲ್ಲಿ ಕೂಡಾ ವಿವಿಧ ಆಯಾಮಗಳನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಗಣೇಶ್.
ಶ್ರೀ ಧೃತಿ ಪ್ರೊಡಕ್ಷನ್ಸ್ ಅಡಿಯಲ್ಲಿ ಕಿಶೋರ್, ಡಾ. ಕೊಡ್ಲಾಡಿ ಸುರೇಂದ್ರ ಶೆಟ್ಟಿ, ರವೀಂದ್ರ ರಾವ್, ಪಿ. ಅರವಿಂದ್ ಕುಮಾರ್, ನರಸಿಂಹ ಮೂರ್ತಿ ಮತ್ತು ಪ್ರಶಾಂತ್ ಸಿ.ಪಿ. ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರವೀಣ್ ರಾಮಕೃಷ್ಣ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ರವಿ ಸುವರ್ಣ ಅವರ 25ನೇ ಛಾಯಾಗ್ರಹಣದ ಸಿನಿಮಾ. ಕಾರ್ತಿಕ್ ವೆಂಕಟೇಶ್ ಸಂಗೀತ ಹಾಗೂ ಗೀತ ಸಾಹಿತ್ಯ ಒದಗಿಸಿದ್ದಾರೆ. ಚೆಲುವ ಮೂರ್ತಿ ಸಂಕಲನ, ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ.