ಬಂಡೀಪುರ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಡೆದಿದ್ದು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಈ ಶೂಟಿಂಗ್ಲ್ಲಿ ಈ ಕಾರ್ಯಕ್ರಮದ ನಿರೂಪಕ ಬೇರ್ಗ್ರಿಲ್ಸ್ ಜೊತೆ ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗಿಯಾಗಿದ್ದರು ಎಂಬುದು.
ಆದ್ರೆ ಇದೀಗ ತಲೈವಾ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ಬೇರ್ ಗ್ರಿಲ್ಸ್ ಜೊತೆ ರಜಿನಿಕಾಂತ್ ಬಂಡೀಪುರ ಕಾಡಿನಲ್ಲಿ ಸುತ್ತಾಡಿರುವ ವಿಶೇಷ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಹುಲಿ ಘರ್ಜನೆ ಜೊತೆ ರಜನಿಕಾಂತ್ರನ್ನು ತೋರಿಸಲಾಗಿದೆ. ಅಲ್ಲದೆ ರಜಿನಿ ಬೈಕ್ ಸವಾರಿ ಮಾಡುವ ದೃಶ್ಯಗಳು ಕುತೂಹಲ ಮೂಡಿಸಿವೆ.