ಮಲಯಾಳಂನ ಖ್ಯಾತ ಹಾಗೂ ಹಿರಿಯ ನಟ ಮಮ್ಮುಟ್ಟಿ ಅವರು ಇಂದು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಲಿವುಡ್ ಮೆಗಾಸ್ಟಾರ್ನ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಮಮ್ಮುಟ್ಟಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತ ಮಮ್ಮುಟ್ಟಿ ಅವರ ಮಗಳು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
70ನೇ ವಸಂತಕ್ಕೆ ಕಾಲಿಟ್ಟ ಮಮ್ಮುಟ್ಟಿ: ತನ್ನ ಕೈಯ್ಯಾರೆ ಅಪ್ಪನ ಭಾವಚಿತ್ರ ಬಿಡಿಸಿ ಗಿಫ್ಟ್ ಕೊಟ್ಟ ಪುತ್ರಿ - Mollywood Megastar
ಜನ್ಮದಿನದ ಸಂಭ್ರಮದಲ್ಲಿರುವ ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅವರಿಗೆ ಅವರ ಮಗಳು ಸುರುಮಿ ಇದೇ ಮೊದಲ ಬಾರಿಗೆ ತನ್ನ ಕೈಯ್ಯಾರೆ ಅಪ್ಪನ ಭಾವಚಿತ್ರ ಬಿಡಿಸಿ ಗಿಫ್ಟ್ ಕೊಟ್ಟಿದ್ದಾರೆ.
Mammootty gets the best birthday gift from daughter Surumi
ಚಿತ್ರ ಕಲಾವಿದೆಯಾಗಿರುವ ಕುಟ್ಟಿ ಸುರುಮಿ ಅವರು ಇದೇ ಮೊದಲ ಬಾರಿಗೆ ತನ್ನ ಕೈಯ್ಯಾರೆ ಅಪ್ಪನ ಭಾವಚಿತ್ರ ಬಿಡಿಸಿ ಗಿಫ್ಟ್ ಕೊಟ್ಟಿದ್ದು, ಈ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಚ್ಚ ಹಸಿರು ಎಲೆಗಳು ಮತ್ತು ಹೂವುಗಳ ನಡುವೆ ತಂದೆಯ ಮುಖ ಇರುವಂತೆ ಚಿತ್ರ ಬಿಡಿಸಿದ್ದಾರೆ.
ಈ ಉಡುಗೊರೆ ಕಂಡ ಮಮ್ಮುಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪೋಟೋವನ್ನು ಅಭಿಮಾನಿಗಳು ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲೂ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.