ಮಾಲಿವುಡ್ನ ಸುಪ್ರಸಿದ್ಧ ನಟರಾದ ಮೋಹನ್ಲಾಲ್ ಮತ್ತು ಮಮ್ಮುಟ್ಟಿ ನಡುವಿನ ಸಹೋದರ ಬಂಧ ಇಂದು ನಿನ್ನೆಯದಲ್ಲ. ಕೆಲವೊಂದು ಸಲ, ಈ ನಟರು ಜೊತೆಗಿರುವ ಫೋಟೋ ಹಂಚಿಕೊಂಡರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುವುದಿದೆ. ಅದೇ ರೀತಿ ಇತ್ತೀಚೆಗೆ ಮಮ್ಮುಟ್ಟಿ ಜೊತೆಗಿರುವ ಫೋಟೋ ಒಂದನ್ನು ಮೋಹನ್ಲಾಲ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಮಂದಹಾಸದ ಮುಖದಿಂದ ಕೂಡಿದ ಮಮ್ಮುಟ್ಟಿ ಜೊತೆಗಿರುವ ಕ್ಯಾಂಡಿಡ್ ಫೋಟೋವನ್ನು ಮೋಹನ್ಲಾಲ್ ಹಂಚಿಕೊಂಡಿದ್ದು, ಜೊತೆಗೆ ವಿತ್ 'ಇಚ್ಚಕ್ಕಾ' ( ಅಣ್ಣ) ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ತಾರಾಪಟ್ಟ ಬಂದ ಬಳಿಕ, ನಟ - ನಟಿಯರು ಪರಸ್ಪರ ಮುಖವೇ ನೋಡುವುದಿಲ್ಲ. ಅಂತಹುದರಲ್ಲಿ ಪ್ರಸಿದ್ದ ನಟನೋರ್ವ, ಇನ್ನೋರ್ವ ಸ್ಟಾರ್ ನಟನನ್ನು ಅಣ್ಣಾ ಎಂದು ಕರೆಯುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ :ಬ್ರೇಕ್ ಇಲ್ಲದ ಗಾಡಿಯಂತೆ ನುಗ್ಗುತ್ತಿದೆ ಕೆಜಿಎಫ್ 2 ಟೀಸರ್... 7 ಗಂಟೆಯಲ್ಲಿ ಒಂದೂವರೆ ಕೋಟಿ ಜನ ವೀಕ್ಷಣೆ!
ಮಮುಟ್ಟಿಯನ್ನು ಸಾಮಾನ್ಯವಾಗಿ ಎಲ್ಲರೂ 'ಮಮ್ಮುಕ್ಕ' ಎಂದು ಕರೆಯುದುಂಟು, ಆದರೆ, ಮೋಹನ್ಲಾಲ್ ಮಾತ್ರ ಅವರನ್ನು 'ಇಚ್ಚಕ್ಕಾ' ಎಂದು ಪ್ರೀತಿಯಿಂದ ಕರೆಯತ್ತಾರೆ. ಫೋಟೋದಲ್ಲಿ ಮುಮ್ಮುಟ್ಟಿಯವರು, ಅರ್ಧ ತೋಳಿನ ತಿಳಿ ಗುಲಾಬಿ ಬಣ್ಣದ ಶರ್ಟ್ ಧರಿಸಿ, ಗಡ್ಡ ಕೂದಲು ಬಿಟ್ಟು ಯುವಕನಂತೆ ಮಿಂಚುತ್ತಿದ್ದರೆ, ಮೋಹನ್ ಲಾಲ್ ಕಪ್ಪು ಬಣ್ಣದ ಫುಲ್ ಸ್ಲೀವ್ ಶರ್ಟ್ ಧರಿಸಿ, ಇಚ್ಚಕ್ಕಾನ ಕಿವಿಯಲ್ಲಿ ಏನೋ ಹೇಳುತ್ತಿದ್ದಾರೆ.
ಸದ್ಯ, ಮೋಹನ್ಲಾಲ್ ಹಂಚಿಕೊಂಡಿರುವ ಈ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಕಮೆಂಟ್, ಲೈಕ್ಗಳ ಮೂಲಕ ಇಬ್ಬರು ನಟರ ಭಾಂದವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಹೊಸ ಸಿನಿಮಾ ಮಾಡುವ ಯೋಚನೆ ಇದ್ಯಾ..? ಇಬ್ಬರು ಸ್ಕ್ರೀನ್ ಮೇಲೆ ಒಟ್ಟಾಗಿ ಕಾಣಿಸಿಕೊಳ್ತಿದ್ದೀರಾ.? ಎಂದು ಪ್ರಶ್ನಿಸಿದ್ದಾರೆ.