ಹಿಂದಿಯಲ್ಲಿ ಮೂಡಿಬರುತ್ತಿರುವ ಮತ್ತು ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ವಿವಾದಾತ್ಮಕ ಬಿಗ್ ಬಾಸ್-13 ಆವೃತ್ತಿಗೆ ಈ ವೀಕೆಂಡ್ಗೆ ನಟಿ ಮಲ್ಲಿಕಾ ಶರಾವತ್ ಪ್ರವೇಶಿಸಲಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಕಾರು ಹತ್ತುತ್ತಿದ್ದಾರೆ. ವಿಡಿಯೋ ಶೇರ್ ಮಾಡಿ ಬರೆದಿರುವ ಇವರು ನಾನು ಬಿಗ್ ಬಾಸ್ ಶೂಟಿಂಗ್ಗೆ ಹೋಗುತ್ತಿದ್ದೇನೆ. ನಿಮ್ಮ ಬಳಿ ಏನಾದ್ರು ಐಡಿಯಾ ಇದ್ರೆ ಕೊಡಿ ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.
ಇನ್ನು ಕಳೆದ 13 ಸೀಸನ್ಗಳಲ್ಲಿ ನಾಲ್ಕನ್ನು ಹೊರತುಪಡಿಸಿ ಉಳಿದೆಲ್ಲಾ ಸೀಸನ್ಗಳನ್ನು ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟಿದ್ದಾರೆ. ಈ ಬಾರಿ ನಡೆಯುತ್ತಿರುವ ಬಿಗ್ ಬಾಸ್ ಶೋನಲ್ಲಿ ಕೇವಲ ಸೆಲೆಬ್ರೆಟಿಗಳೇ ಇದ್ದಾರೆ. ಇವರುಗಳಿಗೆ ಈ ವಾರಾಂತ್ಯ ಆಶ್ಚರ್ಯ ಕಾದಿದ್ದು, ಅತಿಥಿಯಾಗಿ ಮಲ್ಲಿಕಾ ಶರಾವತ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.
ಇನ್ನು ಈ ರಿಯಾಲಿಟಿ ಶೋನಲ್ಲಿ ತುಂಬಾ ಅಶ್ಲೀಲತೆ ಇದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವರು ಹೊರಗಡೆ ಬಿಗ್ ಬಾಸ್ ಬ್ಯಾನ್ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.